ಮಾಜಿ ಶಾಸಕ ನೇಮಿರಾಜನಾಯ್ಕ ಮಾಡಿರುವುದು ಸುಳ್ಳು ಆರೋಪ ಸೂಕ್ತ ದಾಖಲೆ ಒದಗಿಸಲಿ ಇಲ್ಲವಾದಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ,
ಹಗರಿಬೊಮ್ಮನಹಳ್ಳಿ :
ಮಾಜಿ ಶಾಸಕ ನೇಮಿರಾಜನಾಯ್ಕ ಕೊಟ್ಟೂರಿನಲ್ಲಿ ಸುದ್ಧಿಗೋಷ್ಟಿ ನಡೆಸಿ ನಾರಾಯಣದೇವರಕೆರೆ ಗ್ರಾಮದ ವಾಲ್ಮೀಕಿ ಭವನ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವುದು ಶುದ್ಧ ಸುಳ್ಳು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರೋಗಾಣಿ ಹುಲುಗಪ್ಪ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಸುದಿಗಾರರೊಂದಿಗೆ ಮಾತನಾಡಿ, ನಾರಾಯಣದೇವರಕೆರೆ ಗ್ರಾಮದ ವಾಲ್ಮೀಕಿ ಭವನ ನಿರ್ಮಾಣದಲ್ಲಿ ಕೆಆರ್‍ಐಡಿಎಲ್ ಸಂಸ್ಥೆಯಿಂದ 39ಲಕ್ಷ ರೂಗಳನ್ನು ಡ್ರಾ ಮಾಡಿಕೊಂಡು ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿರುವುದನ್ನು ನಾರಾಯಣದೇವರಕೆರೆ ಗ್ರಾಮಸ್ಥರು ಖಂಡಿಸುತ್ತೇವೆ. 2013-14ನೇ ಸಾಲಿನಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ ಎಸ್‍ಟಿ ಕಾಲನಿಯಲ್ಲಿ 10ಲಕ್ಷ ರೂ ವೆಚ್ಚದಲ್ಲಿ ವಾಲ್ಮೀಕಿ ಭವನ ಮಂಜೂರಾಗಿತ್ತು. ಭವನದೊಳಗಿನ ಸಭಾಮಂಟಪ ಸೇರಿದಂತೆ ಇನ್ನಿತರ ಕಾಮಗಾರಿಗಳು ಪೂರ್ಣಗೊಳಿಸಲು ಹಾಲಿ ಶಾಸಕ ಭೀಮಾನಾಯ್ಕರನ್ನು ಗ್ರಾಮಸ್ಥರು ಒತ್ತಾಯಿಸಿದಾಗ 2017-18ರಲ್ಲಿನ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಲ್ಲಿ ಮಂಜೂರುಗೊಂಡಿದ್ದ 1ಕೋಟಿ ಮೊತ್ತದ ಅನುದಾನದಲ್ಲಿ ಭವನದ ಕಾಮಗಾರಿಗಳನ್ನು ಪೂರ್ಣಗೊಳಿಸಲು 12ಲಕ್ಷ ರೂಗಳನ್ನು ನೀಡಿದ್ದರು.

ಆದರೆ ಮಾಜಿ ಶಾಸಕ ನೇಮಿರಾಜನಾಯ್ಕ ಕೊಟ್ಟೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ನಾರಾಯಣದೇವರಕೆರೆ ಗ್ರಾಮದಲ್ಲಿ 39ಲಕ್ಷ ರೂ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿರುವುದು ಶುದ್ಧ ಸುಳ್ಳು. ಹಿನ್ನಲೆಯಲ್ಲಿ ಸೂಕ್ತ ದಾಖಲೆ ಒದಗಿಸಿ ಸಾಬೀತುಪಡಿಸಬೇಕು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಗ್ರಾಮದ ಹೆಸರನ್ನು ಬಳಸಿಕೊಂಡಿದ್ದಕ್ಕೆ ಗ್ರಾಮಸ್ಥರಿಗೆ ಬಹಿರಂಗ ಕ್ಷಮೆಯಾಚಿಸಬೇಕು ಎಂದರು.ಈ ಸಂದರ್ಭದಲ್ಲಿ ವಾಲ್ಮೀಕಿ ಮಹಾಸಭಾದ ತಾಲೂಕಾಧ್ಯಕ್ಷ ಚಿಂತ್ರಪಳ್ಳಿ ದೇವೇಂದ್ರಪ್ಪ, ಮುಖಂಡರಾದ ಡಿಶ್ ಮಂಜುನಾಥ, ಟಿ.ಯಮುನಪ್ಪ, ಎಚ್.ಮಾರುತಿ, ರೋಗಾಣಿ ಪ್ರಕಾಶ್, ಟಿ.ವೆಂಕಟೇಶ್, ಬಿ.ನಾಗರಾಜ, ಎಚ್.ರವಿ, ಸಿ.ಹುಲುಗಪ್ಪ, ಟಿ.ರಂಗ, ಬಿ.ರಾಮಾಂಜಿನೇಯ, ಇತರರಿದ್ದರು.

Share and Enjoy !

Shares