ವಿಜಯನಗರವಾಣಿ ಸುದ್ದಿ
ರಾಯಚೂರುಜಿಲ್ಲೆ
ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ಉತ್ತರ ಪ್ರದೇಶ ಹತ್ರಾಸ್ ಗ್ರಾಮದಲ್ಲಿ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಹಟ್ಟಿ ಕ್ಯಾಂಪ್ ಬಸ್ ನಿಲ್ದಾಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘ ಹಟ್ಟಿ ಪಟ್ಟಣದ ಘಟಕ ಮತ್ತು ಶ್ರೀರಾಮ ಸೇನೆ ಲಿಂಗಸುಗೂರು ಜಂಟಿಯಾಗಿ ಪ್ರತಿಭಟನೆ ಮಾಡಿ ಹಟ್ಟಿ ಪೊಲೀಸ್ ಅಧಿಕಾರಿ ಮುದ್ದುರಂಗಸ್ವಾಮಿ ಅವರ ಮೂಲಕ ಕೇಂದ್ರ ಗೃಹ ಮಂತ್ರಿಗೆ ಮನವಿ ಪತ್ರ ನೀಡಲಾಯಿತು
ಈ ಪ್ರತಿಭಟನೆಯಲ್ಲಿ ಹಟ್ಟಿ ಪಟ್ಟಣದಲ್ಲಿನ ವಿವಿದ ಸಂಘಟನೆಗಳ ಅವರು ಪಾಲ್ಗೊಂಡಿದ್ದರು.