ದಿಢೀರ್ ಹರಿದು ಬಂದ ನೀರು ಸಿಲುಕಿಕೊಂಡು ವ್ಯಕ್ತಿಗಳು

  • ವಿಜಯನಗರವಾಣಿ ಸುದ್ದಿ
    ರಾಯಚೂರು ಜಿಲ್ಲೆ
    ಮಸ್ಕಿ :- ಹಳ್ಳದಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ವ್ಯಕ್ತಿಗಳು ದಿಢೀರ್ ಹರಿದು ಬಂದ ನೀರಿನಿಂದ ಮದ್ಯದಲ್ಲಿ ಸಿಲುಕಿಕೊಂಡ ಘಟನೆ ಮಸ್ಕಿಯಲ್ಲಿ ನಡೆದಿದೆ.
    ಹೌದು ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಹೊರ ವಲಯದಲ್ಲಿನ ಹಳ್ಳಕ್ಕೆ ಮಾರಲ ದಿನ್ನಿ ಡ್ಯಾಂ ನಿಂದ ಏಕಾ ಏಕಿ ನೀರು ಬಿಡಲಾಗಿದೆ. ಇನ್ನು ಇತ್ತ ಪಟ್ಟಣದ ಹೊರ ವಲಯದಲ್ಲಿನ ಹಳ್ಳಕ್ಕೆ ಕೆಲ ನಿವಾಸಿಗಳು ಬೆಳಗಿನ ನಿತ್ಯಕರ್ಮ ಮತ್ತು ಸ್ನಾನಕ್ಕೆಂದು ತೆರಳುತ್ತಾರೆ ಇದೇ ರೀತಿಯಾಗಿ ಇಂದು ಹಳ್ಳಕ್ಕೆ ತೆರಳಿದ್ದ ಇಬ್ಬರು ವ್ಯಕ್ತಿಗಳು ಏಕಾ ಏಕಿ ನೀರು ಬಂದ ಹಿನ್ನೆಲೆ ಹಳ್ಳದ ಮಧ್ಯದಲ್ಲಿ ಸಿಲುಕಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಸ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಕಾರ್ಯಚರಣೆಗೆ ಮುಂದಾಗಿದ್ದಾರೆ.

Share and Enjoy !

Shares