ಗದ್ದೆಯಂತಾದ ತೊರಣದಿನ್ನಿ ರಸ್ತೆ.ವಾಹನ ಸವಾರರು ಪರದಾಟ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ:
ರಾಯಚೂರು ಜಿಲ್ಲೆ:

ಮಸ್ಕಿ: ತಾಲೂಕಿನ ತೋರಣದಿನ್ನಿ ಗ್ರಾಮದ ರಸ್ತೆ ಕಳೆದ ಎರಡು ದಿನಗಳ ಮಳೆಗೆ ಸಂಪೂರ್ಣ ಕೆಸರು ಗದ್ದೆಯಂತಾಗಿದ್ದು ಸವಾರರು ಈ ರಸ್ತೆಗಳಲ್ಲಿ ಓಡಾಡುವುದು ದುಸ್ತರವಾಗಿದೆ.ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ.ಸ್ಥಳೀಯ ಸಂಸ್ಥೆಗಳ ದಿವ್ಯ ನಿರ್ಲಕ್ಷ್ಯ ತೋರಿದ್ದರಿಂದ ಮಳೆ ನೀರು ರಸ್ತೆಗೆ ಹರಿಯುತ್ತಿದ್ದು ಇದರಿಂದ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ರಸ್ತೆಗಳು ಮಳೆಗೆ ಮತ್ತಷ್ಟು ಕೆಸರು ಗದ್ದೆಯಂತಾಗಿ ವಾಹನಗಳು ಜನರು ರಸ್ತೆ ದಾಟಲು ಪರದಾಡುತ್ತಿದ್ದಾರೆ. ರಸ್ತೆ ಗುಂಡಿಗಳಲ್ಲಿ ನೀರು ನಿಂತಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಜನ ದಿನದುಡುತ್ತಿದ್ದರೆ .ಮೊದಲೇ ಕಿಲ್ಲರ್ ಕೊರೋನದಿಂದ ಬಳಲಿ ಬೆಂಡಾಗಿರುವ ಜನಕ್ಕೆ ಮತ್ತೊಂದು ಆತಂಕ ಎದುರಾಗಿದೆ . ಈಗಲಾದರೂ ಸಂಬಂಧ ಪಟ್ಟ ಅಧಕಾರಿಗಳು ರಸ್ತೆ ಸರಿಮಾಡಿ ವಾಹನ ಸವಾರರಿಗೆ ಮತ್ತು ಸಾರ್ವಜನಕರಿಗೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರ ಒತ್ತಾಯ ವಾಗಿದೆ. ರಸ್ತೆ ಕಾಮಗಾರಿ ಯನ್ನು ವೈಜ್ಞಾನಿಕವಾಗಿ ಮತ್ತು ಸಮರ್ಪಕವಾಗಿ ಮಾಡಿದ್ದರೆ ಇಂದು ಈ ಪರಿಸ್ಥಿತಿ ಏದುರಾಗುತ್ತಿರಲಿಲ್ಲ .ಎಂದು ಛಲವಾದಿ ಮಾಹಾಸಭಾ ಹೋಬಳಿ ಘಟಕದ ಅಧ್ಯಕ್ಷ ರಾಜು ಆರೋಪಿಸಿದರು

Share and Enjoy !

Shares