ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ದೇವದುರ್ಗ: ತಾಲೂಕಿನ ಜಾಲಹಳ್ಳಿ ಸಮೀಪದ ಮ್ಯಾಕಲದೊಡ್ಡಿ ಕಮಲದಿನ್ನಿ ವ್ಯಾಪ್ತಿಗೆ ಬರುವ ಸರ್ವೇ ನಂಬರ್ 7 38 39 ಸುಮಾರು 20 ಎಕರೆ ಭೂಮಿಯಲ್ಲಿ ಭತ್ತ ಬೆಳೆಯಲಾಗಿತ್ತು ಎರಡು ದಿನಗಳಿಂದ ಧಾರಾಕಾರವಾಗಿ ಸರಿಯುತ್ತಿರುವ ಮಳೆಯಿಂದ ಭತ್ತವೆಲ್ಲ ನೆಲಕ್ಕೆ ಉರುಳಿದೆ ರೈತರು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಅನ್ನದ ಅಧಿಕಾರಿಗಳು ರೈತರು ಗೊಬ್ಬರ ಎಣ್ಣೆ ಸಾಲ ಮಾಡಿ ತಂದಿದ್ದು ಅದನ್ನು ಕಟ್ಟಲು ಹಣ ಇಲ್ಲದೆ ಪರದಾಡುವಂತ ಸ್ಥಿತಿ ಬಂದಿದೆ
ಬೆಳೆಯನ್ನೇ ನಂಬಿಕೊಂಡು ಕುಂತಿದ್ದ ರೈತರು ಅದುಕೂಡ ಮಳೆಯಿಂದ ನಾಶವಾಗಿದೆ ಇನ್ನು ರೈತರು ಬೆಳೆ ಬೆಳೆಯಲು ಸಾಲಸೋಲ ಮಾಡಿ ಎಣ್ಣೆ ಗೊಬ್ಬರ ಕರದಿ ಮಾಡಿಕೊಂಡು ತಂದಿದ್ದು ಇನ್ನು ಬೆಳಕೂಡ ಸಂಪೂರ್ಣವಾಗಿ ನಾಶವಾಗಿದ್ದು ರೈತರು ಸಾಲ ಕಟ್ಟಲು ಏನು ಮಾಡಬೇಕು ಅಂತ ಗೊತ್ತು ಆಗದೆ ಮುಂದೇನು ಮಾಡಬೇಕು ಅಂತ ಯೋಚನೆಗೆಒಳಗಾಗಿದ್ದಾರೆ
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಹೊಲದಲ್ಲಿ ನಾಶವಾದ ಭತ್ತ ಪರಿಶೀಲನೆ ಮಾಡಿ ಸರ್ಕಾರದಿಂದ ಬರುವ ಪರಿಹಾರ ಸಿಗದೇ ಹೋದರೆ ನಾವು ವಿಷಯ ಸೇವಿಸಿಕೊಳ್ಳುತ್ತೇವೆ ಎಂದು ರೈತರು ಆಗ್ರಹಿಸಿದ್ದಾರೆ