ನಿವೃತ್ತ ದೈಹಿಕ ಶಿಕ್ಷಕ ಜವಾಯ್‍ಗೆ ಸನ್ಮಾನ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ,
ಹಗರಿಬೊಮ್ಮನಹಳ್ಳಿ:
ತಾಲೂಕಿನ ಹಂಪಾಪಟ್ಟಣದ ಶ್ರೀಚಂದ್ರಮೌಳೇಶ್ವರ ಪ್ರೌಢಶಾಲೆಯ ದೈಹಿಕ ಶಿಕ್ಷಕ ವಿ.ಜವಾಯ್ ದಂಪತಿಯನ್ನು 1986ರ ಸಾಲಿನ ಎಸೆಸೆಲ್ಸಿ ವಿದ್ಯಾರ್ಥಿ ಬಳಗದಿಂದ ಶಾಲಾ ಆವರಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಮರಬ್ಬಿಹಾಳ್ ಗ್ರಾಮದ ನಿವಾಸಿ ಸಿ.ಪಿ.ಐ. ಡಿ.ಹುಲುಗಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಮಾರ್ಗದೆಡೆಗೆ ಕೊಂಡೊಯುವಂತಹ ಕೆಲಸ ಗುರುವಿನ ಗುರುತರವಾದ ಜವಬ್ದಾರಿಯಾಗಿರುತ್ತದೆ. ದೈಹಿಕ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಉತ್ಸಾಹ ಮೂಡಿಸಿ ಅವರನ್ನು ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತೆ ಶ್ರಮಿಸಿ ಗ್ರಾಮೀಣ ಮಟ್ಟದಿಂದ ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಸ್ಪರ್ಧಿಸುವಂತೆ ಶ್ರಮವಹಿಸುತ್ತಾರೆ. ವಿದ್ಯಾರ್ಥಿಳಿಗೆ ಆತ್ಮಸ್ಥೈರ್ಯ ತುಂಬುವ ಜೊತೆಗೆ ಕೀರ್ತಿವಂತರಾಗಲು ದೈಹಿಕ ಶಿಕ್ಷಕರು ಪ್ರೇರಣೆ ನೀಡುತ್ತಾರೆ ಎಂದರು.ನಂತರ ಹುಬ್ಬಳ್ಳಿಯ ಕೆಎಸ್‍ಆರ್‍ಸಿಟಿ ಕಾರ್ಮಿಕ ಕಲ್ಯಾಣ ವಿಭಾಗಾಧಿಕಾರಿ ಪಿ.ವೈ.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ವಯೋ ನಿವೃತ್ತಿ ಪ್ರತಿಯೊಬ್ಬ ನೌಕರರಿಗೆ ಅನಿವಾರ್ಯ, ಸರ್ಕಾರಿ ಸೇವೆಯಲ್ಲಿ ಇರುವ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಜವಬ್ದಾರಿಯಿಂದ ನಿರ್ವಹಿಸಿದರೆ, ಉತ್ತಮ ಸಮಾಜ ನಿರ್ಮಾಣ ಮಾಡಬಹುದು. ದೇಶದ ಭಾವಿಪ್ರಜೆಗಳನ್ನು ಸನ್ಮಾರ್ಗದಲ್ಲಿ ನಡೆಸುವಂತಹ ಹೊಣೆ ಶಿಕ್ಷಕರದಾಗಿರುತ್ತದೆ. ಆ ನಿಟ್ಟಿನಲ್ಲಿ ದೈಹಿಕ ಶಿಕ್ಷಕ ಜವಾಯಿಯವರು ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿ ಉಳಿದುಕೊಳ್ಳುವಂತಹ ಮಾರ್ಗದರ್ಶಕರಾಗಿದ್ದರು ಎಂದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ಕೆ.ಚಂದ್ರನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಕಲಾಶಿಕ್ಷಕ ಬಂಡಿವಾಡ, ಹಳೇ ವಿದ್ಯಾರ್ಥಿಗಳಾದ ಜೆ.ಆಚಾರ್ ರಾಜಣ್ಣ, ಕೆ.ಬಾಬು ರಾಜೇಂದ್ರ ಪ್ರಸಾದ್, ರಾಜಭಕ್ಷಿ, ಜಿ.ಮಂಜುನಾಥ, ಎಲ್.ಚಂದ್ರನಾಯ್ಕ, ಕೆ.ಮಂಜುನಾಥ, ಡಿ.ಕೃಷ್ಣಮೂರ್ತಿ, ವಿ.ರಂಗಪ್ಪ, ಮಧುಸೂಧನ್ ಜೋಷಿ ಇದ್ದರು.

Share and Enjoy !

Shares