ಮರು ಡಾಂಬರೀಕರಣ ಕಾಮಗಾರಿ ಕಳಪೆ ಯಲ್ಲನಗೌಡ ಆರೋಪ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸ್ಗೂರು : ತಾಲೂಕಿನ ಅಮರೇಶ್ವರ ದಿಂದ ಗೋನವಾಟ್ಲ ತಾಂಡಾದವರಗೆ ಮರು ಡಾಂಬರೀಕರಣ ಕಾಮಗಾರಿ ಬೇಕಾಬಿಟ್ಟಿ ಮಾಡಿ ಬಿಲ್ ಸೀಮತವಾಗುವ ರೀತಿಯಲ್ಲಿ ರಸೆಯಲ್ಲಿ ಮರು ಡಾಂಬರೀಕರಣ ಮಾಡಿ ಕಾಮಗಾರಿ ಮುಗಿಸಲಾಗಿದೆ ಇದರಿಂದ ಸವಾರರಿಗೆ ತುಂಬಾ ತೊಂದರೆಯಾಗಿದೆ ಎಂದು ಯುವ ಮುಖಂಡ ಯಲ್ಲನಗೌಡ ಪಾಟೀಲ್ ಪತ್ರಿಕೆಗೆ ತಿಳಿಸಿದ್ದಾರೆ.
ಗೋನವಾಟ್ಲ ತಾಂಡಾ, ಗೋನವಾಟ್ಲ, ಗುಂತಗೋಳ, ಅಮರೇಶ್ವರದವರಗೆ ಕೆಲ ತಿಂಗಳ ಹಿಂದೆಯಷ್ಟೆ ಮಾಡಿದ ಮರು ಡಾಂಡರೀಕರಣ ಕಾಮಗಾರಿ ಮಾಡಿ ಮುಗಿಸಿದ್ದರು, ಗ್ರಾಮಗಳ ಮುಂದೆ ೧ ಕೀ.ಲೋ ಮೀmರ್‌ವರೆಗೆ ಸಿಸಿರಸ್ತೆ ಮಾಡಲು ಬಿಟ್ಟಿದರು ಎಂದು ಹೇಳಿ ಮರು ಡಾಂಬರೀಕರಣ ಮಾಡಲಾಗಿತ್ತು ರಸ್ತೆಯ ಬದಿಯಲ್ಲಿ ಗಿಡ್ಡಗಂಟಿ ತೆಗೆಯದೇ ಮರು ಡಾಂಬರೀಕರಣ ಮಾಡಲಾಗಿತ್ತು ಆದರೆ ತಿಂಗಳು ಕಳೆದು ಹೋಗಿದೆ ಮರು ಡಾಂಬರೀಕರಣ ಕಿತ್ತು ಹೋಗಿದೆ ಇದರಿಂದ ಗೊತ್ತಾಗುತ್ತದೆ ಕಾಮಗಾರಿ ಸಂಪೂರ್ಣವಾಗಿ ಕಳಪೆ ಮಟ್ಟದಿಂದ ಕೂಡಿದೆ ಎಂದರು.
ಗ್ರಾಮಗಳು ಮುಂದೆ ೧ಕಿಲೋ ಮೀಟರ್ ರಸ್ತೆಯ ಇಲ್ಲಿಯವೆಗೆ ಡಾಂಬರೀಕರಣ ಮತ್ತು ಸಿಸಿರಸ್ತೆ ಏನೂ ಸಹ ಮಾಡಿಲ್ಲ, ಇವಾಗಲೇ ಮರು ಡಾಂಬರೀಕರಣ ಕಾಮಗಾರಿ ಕಿತ್ತಿಹೋಗಿದೆ.
ಅಮರೇಶ್ವರದಿಂದ ಗೋನವಾಟ್ಲ ತಾಂಡವರೆಗೆ ಚಲುಸುವಾಗ ಎಲ್ಲಿಲ್ಲಿ ಡಾಂಬರೀಕರಣ ಕಿತ್ತಿಹೋಗಿದೆ ಎಂದು ಅಧಿಕಾರಿಗಳು ಬಂದು ನೋಡಲಿ ಏಕೆಂದರೆ ಅಧಿಕಾರಿಗಳು ಕಾಮಗಾರಿ ನಡೆಯುವಾಗ ಬಂದಿಲ್ಲ ಗುತ್ತಿಗೆದಾರರು ಬೇಕಾಬಿಟ್ಟಿ ಡಾಮಬರೀಕರಣ ಮಾಡಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ ಎಂದು ಹೇಳಿದರು.
ಈ ಭಾಗವನ್ನು ಶಾಸಕರು ಸಂಪೂರ್ಣವಾಗಿ ನಿರ್ಲಕ್ಷö್ಯ ವಹಿಸಿದ್ದಾರೆ, ಕಾಮಗಾರಿಗಳು ನಡೆದರು ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಲ್ಲ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಲ್ಲ ಗುಣಮಟ್ಟವನ್ನು ಪರಿಶೀಲನೆ ಮಾಡಲ್ಲ ಇದರಿಂದ ಅಧಿಕಾರಿಗಳು ಗುತ್ತಿಗೆದರರ ಜೊತೆಗೆ ಶಾಮೀಲು ಆಗಿದ್ದಾರೆ ಎಂದು ಆರೋಪ ಮಾಡಿದರು.

Share and Enjoy !

Shares