ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ :
ಕಂಪ್ಲಿ: ಪಟ್ಟಣದಲ್ಲಿ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಅಬ್ದುಲ್ ಕಲಾಂ ಟ್ರಸ್ಟ್ ಹಾಗೂ ಕಂಪ್ಲಿ ಜೆಸಿಐ ಸೋನಾ ಘಟಕದ ಸಹಯೋಗದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡ ಕೋವಿಡ್-19ನ ಮಾಸ್ಕ್ ಜಾಗೃತಿ ಜಾಥಾ ನಡೆಯಿತು.ನಂತರ ಸಿಂಗಂ ಪಿಎಸ್ಐ ಮೌನೇಶ್ ಉ.ರಾಥೋಡ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು. ಅಂತರದೊಂದಿಗೆ ಸ್ಯಾನಿಟೈಸರ್ ಬಳಸಬೇಕು. ‘ಕೋವಿಡ್-19 ಸೋಂಕನ್ನು ತೊಲಗಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ. ರೋಗದ ಬಗ್ಗೆ ಜನರು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಅಮೂಲ್ಯವಾದ ಜೀವ ಉಳಿಸಿಕೊಳ್ಳಲು ಅಂತರದೊಂದಿಗೆ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು’ ಎಂದರು.ಪೊಲೀಸ್ ಠಾಣೆ, ನಡುವಲ ಮಸೀದಿ, ಡಾ.ರಾಜಕುಮಾರ್ ರಸ್ತೆ, ಅಂಬೇಡ್ಕರ್ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಸಾರ್ವಜನಿಕರಿಗೆ 500 ಉಚಿತ ಮಾಸ್ಕ್ ವಿತರಿಸುವ ಮೂಲಕ ಜಾಗೃತಿಯೊಂದಿಗೆ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್ಐ ಬಸಪ್ಪ ಲಮಾಣಿ, ಎಎಸ್ಐಗಳಾದ ಸಿ.ಪರಶುರಾಮ, ಹಗರಪ್ಪ, ತ್ಯಾಗರಾಜ ಸೇರಿದಂತೆ ಪೇದೆ(ಎಸ್.ಬಿ) ಸಂತೋಷ ಹಾಗೂ ಸಿಬ್ಬಂದಿಗಳು ಮತ್ತು ಕಂಪ್ಲಿ ಜೆಸಿಐ ಸೋನಾ, ಅಬ್ದುಲ್ ಕಲಾಂ ಟ್ರಸ್ಟ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.