ವಿಜಯನಗರವಾಣಿ ಸುದ್ದಿ
ಕಂಪ್ಲಿ: ಬಿಜೆಪಿ ಪಕ್ಷದ ಬಳ್ಳಾರಿ ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷರಾಗಿ ಕಂಪ್ಲಿಯ ಎನ್.ಚಂದ್ರಕಾಂತರೆಡ್ಡಿ ಆಯ್ಕೆಗೊಂಡಿದ್ದಾರೆ.
ಜನಪ್ರಿಯ ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು ಅವರ ಸೂಚನೆ ಮೇರೆಗೆ ಜಿಲ್ಲಾಧ್ಯಕ್ಷ ಚನ್ನಬಸವಗೌಡ ಅವರ ಆದೇಶದಂತೆ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥರೆಡ್ಡಿ ಅವರು ರೈತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಎನ್.ಚಂದ್ರಕಾಂತರೆಡ್ಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ತತ್ ಕ್ಷಣದಿಂದ ಉಪಾಧ್ಯಕ್ಷ ಸ್ಥಾನ ಅಲಂಕರಿಸಿಕೊಂಡು, ರೈತರ ಸಮಸ್ಯೆಗಳ ವಿರುದ್ಧ ಹೋರಾಡಬೇಕು. ಬಿಜೆಪಿ ಪಕ್ಷದ ಏಳಿಗೆಗೆ ಶ್ರಮಿಸಬೇಕೆಂದು ಸೂಚಿಸಲಾಗಿದೆ.
ಸೋಮವಾರದಂದು ಬಳ್ಳಾರಿಯಲ್ಲಿ ಮಾಜಿ ಶಾಸಕರ ಕಛೇರಿಯಲ್ಲಿ ಜನಪ್ರಿಯ ನಾಯಕ ಟಿ.ಹೆಚ್.ಸುರೇಶ್ ಬಾಬು ನೇತೃತ್ವದಲ್ಲಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥರೆಡ್ಡಿ ಅವರು ಆದೇಶ ಪತ್ರ ನೀಡಿ, ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಎನ್.ಚಂದ್ರಕಾಂತರೆಡ್ಡಿ ಅವರು ಸುರೇಶ್ ಬಾಬು, ಐನಾಥರೆಡ್ಡಿ ಸೇರಿದಂತೆ ಮುಖಂಡರಿಗೆ ಸನ್ಮಾನದೊಂದಿಗೆ ಅಭಿನಂದನೆ ಸಲ್ಲಿಸಿದರು.ಸನ್ಮಾನ: ತಾಲ್ಲೂಕಿನ ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿಯ ಪ್ರಭುಕ್ಯಾಂಪಿನಲ್ಲಿರುವ ಚಂದ್ರಕಾಂತರೆಡ್ಡಿ ಅವರ ನಿವಾಸದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಂಕೇತಿಕ ಸನ್ಮಾನ ಸಮಾರಂಭದಲ್ಲಿ ಬಿಜೆಪಿ ಪಕ್ಷದ ಕಂಪ್ಲಿ ವಿಧಾನಸಭಾ ಕ್ಷೇತ್ರ ಹಾಗೂ ಯೂತ್ ಕಾರ್ಯಕರ್ತರು ರೈತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಎನ್.ಚಂದ್ರಕಾಂತರೆಡ್ಡಿ ಅವರಿಗೆ ಅದ್ಧೂರಿಯಾಗಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ನಂತರ ಚಂದ್ರಕಾಂತರೆಡ್ಡಿ ಮಾತನಾಡಿ, ಜಿಲ್ಲೆಯ ಪ್ರತಿಯೊಬ್ಬ ರೈತರ ಸಮಸ್ಯೆಗಳನ್ನು ಆಲಿಸಿ, ಹೋರಾಟದ ಮೂಲಕ ಪರಿಹರಿಸಲಾಗುವುದು. ದೇಶದ ಬೆನ್ನೆಲುಬಾಗಿರುವ ರೈತರ ಪರವಾಗಿ ಸದಾ ನಿಲ್ಲುವೆ ಎಂದರು.ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಜಿ.ಸುಧಾಕರ, ಮುಖಂಡರಾದ ಕೆ.ವಸಂತಕುಮಾರ, ವಿರುಪಣ್ಣ, ವೆಂಕಟರಮಣ,ಮರಿಯನಾಯಕ, ಬಿ.ಕೆ.ವಿರುಪಾಕ್ಷಿ, ಯುವಕರಾದ ಕೃಷ್ಣನಾಯಕ, ಬಿ.ರಾಜ, ರುದ್ರಪ್ಪನಾಯಕ, ನಾಗರಾಜ ಕಂಬತ್, ವಿಜಯ, ಕಾರ್ತಿಕ ಪಾಲ್ಗೊಂಡಿದ್ದರು.
.