ವಿಜಯನಗರವಾಣಿ ಸುದ್ದಿ
ರಾಯಚೂರು :- ಬಂಗಾಳ ಕೊಲ್ಲಿ ವಾಯುಭಾರ ಕುಸುತದಿಂದ ಮೇಲ್ಬಾಗದಲ್ಲಾಗುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ನಾರಾಯಣಪುರ ಮತ್ತು ಸೊನ್ನ ಬ್ಯಾರೆಜ್ ನಿಂದ 4 ಲಕ್ಷ 80 ಸಾವಿರ ಕ್ಯೂಸಕ್ಸ ನೀರು ನದಿಗೆ ಬಿಡಲಾಗಿದ್ದು ಇದೀಗ ರಾಯಚೂರು ತಾಲ್ಲೂಕಿನ ಹಲವು ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿದೆ. ಹಾಗಾಗಿ ಜಿಲ್ಲಾಡಳಿತ ನದಿ ಪಾತ್ರಕ್ಕೆ ಮತ್ತು ನದಿಯಲ್ಲಿ ತೆಪ್ಪ ಹಾಕುವುದನ್ನ ನಿಷೇಧಿಸಿ ಆದೇಶ ಹೊರಸಿಸಿದೆ.
ಹೌದು ಪ್ರಸ್ತುತ ಕೃಷ್ಣ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಹಾಗೂ ಭೀಮಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಈಗಾಗಲೇ ನಾರಾಯಣಪೂರು ಜಲಾಶಯದಿಂದ ಪ್ರಸ್ತುತ 1.60 ಲಕ್ಷ ಕ್ಯೂಸಕ್ಸ್ ನೀರನ್ನು ಹಾಗೂ ಸೊನ್ನ ಬ್ಯಾರೇಜ್ ನಿಂದ 3.20 ಲಕ್ಷ ಕ್ಯೂಸಕ್ಸ್ ನೀರನ್ನು ಕೃಷ್ಣ ನದಿಗೆ ಬಿಡುಗಡೆ ಮಾಡಿರುತ್ತಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷ್ಣ ನದಿಗೆ ನೀರು ಬಿಡುವ ಸಾಧ್ಯತೆ ಇರುತ್ತದೆ. ಇದರಿಂದ ಜಿಲ್ಲೆಯ ರಾಯಚೂರು ತಾಲೂಕಿನ ಕೃಷ್ಣ ನದಿ ದಡದಲ್ಲಿರುವ ಗ್ರಾಮಗಳು ಸಂಕಷ್ಟಕ್ಕೆ ಒಳಗಾಗುವುದರಿಂದ ಜಿಲ್ಲಾ ವಿಪತ್ತು ವಿರ್ವಹಣಾ ಪ್ರಾಧಿಕಾರವು ಜಿಲ್ಲೆಯ ಜನ-ಜಾನುವಾರುಗಳ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮ ವಹಿಸಬೇಕಾಗಿರುತ್ತದೆ.ಜಿಲ್ಲೆಯ ರಾಯಚೂರು ತಾಲೂಕಿನ ಕೃಷ್ಣ ನದಿ ದಡದಲ್ಲಿರುವ ಗ್ರಾಮಗಳಿಗೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಕೃಷ್ಣ ನದಿ ದಡದ ಹತ್ತಿರ ಹೋಗುವುದನ್ನು ನೀಷೇಧಿಸಿದೆ ಹಾಗೂ ನಾಡ ದೋಣಿ (ತೆಪ್ಪಾ)ಗಳನ್ನು ನದಿಯಲ್ಲಿ ಹಾಕುವುದನ್ನು ನೀಷೇಧಿಸಿದೆ. ಸಾರ್ವಜನಿಕರು ಪ್ರವಾಹ ನಿರ್ವಹಣೆಯಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್ ಅವರು ಮನವಿ ಮಾಡಿಕೊಂಡಿದ್ದಾರೆ.