ನನ್ನ ಮಾಸ್ಕ್ , ನನ್ನ ಲಸಿಕೆ ಎಂಬ ಕೊವಿಡ್ ೧೯ ವಿರುದ್ಧ ಜನಾಂದೊಲನ ಕಾರ್ಯಕ್ರಮ

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆಯ

ಮಸ್ಕಿ: ತಾಲ್ಲೂಕಿನ ಹಾಲಾಪೂರ ಗ್ರಾಮದಲ್ಲಿ ನನ್ನ ಮಾಸ್ಕ್ , ನನ್ನ ಲಸಿಕೆ ಎಂಬ ಕೊವಿಡ್ ೧೯ ವಿರುದ್ಧ ಜನಾಂದೊಲನವನ್ನು ಕವಿತಾಳ ಪೋಲಿಸ್ ಠಾಣೆಯ ಎ ಎಸ್ ಐ ಲಿಂಗನಗೌಡ ಚಾಲನೆ ನೀಡಿದರು ನಂತರ ಮಾತನಾಡಿದ ಅವರು ಕಳೆದ ಏಳೆಂಟು ತಿಂಗಳಿನಿಂದ ಇಡಿ ಮಾನವ ಜೀವನದ ಬದುಕನ್ನು ಏರುಪೇರು ಮಾಡಿದೆ. ಇಡಿ ಮನುಕುಲದ ಜೀವನದ ಸ್ಥಿತಿ ತುಂಬಾ ಸಂಕಷ್ಟದಲ್ಲಿದ್ದು ಅದಕ್ಕೆ ನಾವೆಲ್ಲರೂ ಆರೋಗ್ಯವಂತರಾಗಿ ಇರಬೇಕಾದರೆ ಪ್ರತಿಯೊಬ್ಬರು ಮಾಸ್ಕ್ , ಸಾಮಾಜಿಕ ಅಂತರ, ಸ್ವಚ್ಚತಾ ಬಗ್ಗೆ ಜಾಗೃತರಾಗಬೇಕು , ಇದಕ್ಕೆಲ್ಲ ಸಾರ್ವಜನಿಕರು ಸಹಕರಿಸಬೇಕು . ಹಾಗೆ ಗುಂಪು ಸೇರುವುದು , ಸಾರ್ವಜನಿಕವಾಗಿ ಸಭೆ ಸಮಾರಂಭ ಮಾಡುವುದು ಬಿಡಬೇಕು , ಎಲ್ಲರೂ ಸೇರಿ ಈ ಮಹಾಮಾರಿ ಕೊರೊನ್ ಹೋಗಲಾಡಿಸಲು ನಿಯಮಗಳನ್ನು ಪಾಲಿಸಿ ಆರೋಗ್ಯ ರಕ್ಷಿಸಿಕೊಳ್ಳಲು ಹೇಳಿದರು , ಅದೇ ರೀತಿಯಲ್ಲಿ ಮಾಸ್ಕ್ ಇಲ್ಲದೆ ಇದ್ದವರಿಗೆ ದಂಡವನ್ನು ಹಾಕಿದ್ದೆವೆ ಎಂದು ಎ ಎಸ್ ಐ ಲಿಂಗನಗೌಡ ರವರು ಹೇಳಿದರು . ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಶಂಕರ ಬಿ , ಗುರುಸ್ವಾಮಿ , ರಾಘವೇಂದ್ರ ಕೆ, ದೇವರಾಜ ನಾಗೂರು , ಗ್ರಾಮಸ್ಥರಾದ ಟಿ ಹಂಪನಗೌಡ ಪಾಟೀಲ್ , ಅಮರಪ್ಪ ಮಾ.ಪಾ, ಶಾಂತಯ್ಯಸ್ವಾಮಿ,ಸಿದ್ದಾರ್ಥ್ ಪಾಟೀಲ್ ಯಂಕನಗೌಡ, ಚನ್ನಬಸವ ದಿನ್ನಿ, ಬಸವರಾಜ ಗುತ್ತೆದಾರ, ಪೀರಸಾಬು , ಅಮರೇಶ ತುಂಟಾಪೂರ, ಮಲ್ಲಪ್ಪ , ಬಸವರಾಜ ಕತೆಗಲ್, ಸಂತೋಷ, ಶಿವರಾಜ, ಲಾಲಿಂಗಪ್ಪ ಇತರರು ಇದ್ದರು.

Share and Enjoy !

Shares