ಮಹಾಮಳೆಗೆ ಅಪಾರ ಬೆಳೆ ನಷ್ಟ..!

 

ವಿಜಯನಗರವಾಣಿ ಸುದ್ದಿ
ರಾಯಚೂರು: ಜಿಲ್ಲೆ

ದೇವದುರ್ಗ: ತಾಲೂಕಿನ ಜಾಲಹಳ್ಳಿ ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದಾಗಿ ಅಪಾರ ಬೆಳೆ ನಷ್ಟವಾಗಿದ್ದು,ಅತಿವೃಷ್ಠಿ ಎಂದು ಘೋಷಿಸಿ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ತಹಸಿಲ್ದಾರ್ ವೆಂಕಟೇಶ್ ಕೃಷಿ ಅಧಿಕಾರಿ ತಿಮ್ಮಪ್ಪ ಅವರ ಮುಖಾಂತರ ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು
ಕರೋನ ಸಂಕಷ್ಟದಿಂದ ಬಳಲಿದ ರೈತ ಸಾಲಸೂಲ ಮಾಡಿ ಮುಂಗಾರು ಬಿತ್ತನೆ ಮಾಡಿದ ಬೆಳೆ ಕೈ ಸೇರುವ ಮುನ್ನವೇ ಅತಿಯಾಗಿ ಸುರಿಯುತ್ತಿರುವ ಮಳೆಗೆ ಸಂಪೂರ್ಣ ನಾಶವಾಗಿದ್ದು,ಗಾಯದ ಮೇಲೆ ಬರೆ ಎಳೆದಂತಾಗಿದೆ.ಜಾಲಹಳ್ಳಿ ವ್ಯಾಪ್ತಿಯ ಕಮಲದಿನ್ನಿ ಸೀಮಾ,ಮ್ಯಾಕಲದೊಡ್ದಿ ಸೀಮಾ, ಲಿಂಗದಳ್ಳಿ ಸೀಮಾ,ಚಪ್ಪಳಕಿ ಸೀಮಾ,ಯರಕಮಟ್ಟಿ ಸೀಮಾ,ಹೊರಟ್ಟಿ ಸೀಮಾ,ಜಾಲಹಳ್ಳಿ ಸೀಮಾ,ತಿಂಪೂರ ಸೀಮಾ,ಹಂಪರಗುಂದಿ ಸೀಮಾ,ಕರಡಿಗುಡ್ಡ ಸೀಮಾ ಸೇರಿದಂತೆ ಇನ್ನಿತರೆ ಸೀಮಾಂತರದಲ್ಲಿ ಸುಮಾರು 9500ಎಕ್ಟರ್ ಹತ್ತಿ,9615ಎಕ್ಟರ್ ಭತ್ತ,8220ಎಕ್ಟರ್ ತೊಗರಿ ಬೆಳೆ ಸೇರಿದಂತೆ ಇನ್ನಿತರೆ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿ ಹೋಗಿದ್ದು,ವಾಡಿಕೆಗಿಂತ ಈ ಬಾರಿ ಅತಿಯಾದ ಮಳೆಯಿಂದ ರೈತರ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ಲಕ್ಷಾಂತರ ರೂಪಾಯಿ ಸಾಲ ಸೂಲ ಮಾಡಿ ಬೇಸಾಯ ಮಾಡಿದ ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜಾಲಹಳ್ಳಿ ವ್ಯಾಪ್ತಿಯನ್ನು ಅತಿವೃಷ್ಟಿ ಭೂ ಪ್ರದೇಶ ಎಂದು ಘೋಷಿಸಿ ರೈತರ ಹೊಲಗಳ ಸರ್ವೆ ಮಾಡಿ ಸಂಕಷ್ಟಕ್ಕೆ ಒಳಗಾದ ರೈತರಿಗೆ ತಲಾ ಎಕರೆಗೆ 25ಸಾವಿರ ಪರಿಹಾರ ಧನ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ
ಇದೆ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ನರಸಣ್ಣ ನಾಯಕ ಕಾರ್ಯದರ್ಶಿ ಹನುಮಂತ ಮಂಡಲಗುಡ್ಡ ಜಾಲಹಳ್ಳಿ ಗ್ರಾಮ ಸಮಿತಿಯ ಅಧ್ಯಕ್ಷ ಶಿವರಾಜ ವಠಾರ ಹನುಮಂತ ಮಡಿವಾಳ ಭೀಮಣ್ಣ ಡೆಂಗಿ ಶಬ್ಬೀರ್ ಜಾಲಹಳ್ಳಿ ಮಾನಸಯ್ಯ ದೊರೆ ಕಿಷ್ಟಪ್ಪ ದೊರೆ ಲಕ್ಕ್ಷಕಾಂತ ದೊರೆ ಹನುಮಂತ್ರಾಯ ತ್ಯಾಪ್ಲಿ ಲಿಂಗಣ್ಣ ಮಕಾಶಿ ಯಲ್ಲಪ್ಪ ಗಚ್ಚಿನಮನಿ ರಮೇಶ್ ಬಾವಿಮನಿ ಮೌನೇಶ ದಾಸರ್ ದುರುಗಪ್ಪ ವರಟಿ ಬಸವರಾಜ ಲಿಂಗದಹಳ್ಳಿ ರಂಗನಾಥ್ ಲಿಂಗದಹಳ್ಳಿ ಮತ್ತು ಇತರರು ಇದ್ದರು

Share and Enjoy !

Shares