ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ..
ಸಿಂಧನೂರು: ಮಾಲೀಕರ ಅತಿಯಾದ ಆಸೆಗೆ ಎತ್ತುಗಳಿಗೆ ಚಿತ್ರಹಿಂಸೆ ಕೊಡುವುದು ಎಷ್ಟು ಸರಿ ಇದಕ್ಕೆ ಕೊನೆಎಂದು?
ರೈತನ ಬೆನ್ನೆಲುಬು ಆಗಿದ್ದ ಎತ್ತುಗಳಿಗೆ
ಇತ್ತಿಚಿನ ದಿನಗಳಲ್ಲಿ ಅತ್ಯಾಧುನಿಕ ಎಂತ್ರೊಪಕರಣಗಳು ಬಂದ ಹಿನ್ನೆಲೆ ಕೃಷಿ ಚಟುವಟಿಕೆಗಳಿಗೆ ಎತ್ತುಗಳ ಬಳಿಕೆ ಕಡಿಮೆಯಾಗಿದೆ.
ಆದರೆ ಸಣ್ಣ ರೈತಾಪಿ ವರ್ಗಗಳು ಮಾತ್ರ ಕೃಷಿ ಚಟುವಟಿಕೆಗಳಿಗೆ ಬಳಿಕೆ ಮಾಡುತ್ತಿದ್ದಾರೆ
ಆದರೆ ಸಿಂದನೂರು ನಗರದಲ್ಲಿ ಕೆಲವರು
ಕೃಷಿ ಚಟುವಟಿಕೆಗಿಂತ ಹೆಚ್ಚು
ತಮ್ಮ ಅತಿಆಸೆಗೆ ಮರಳು ಸಾಗಣೆಗೆ ನಿಂತಿದ್ದು ಎತ್ತುಗಳಿಗೆ ಸಾಮರ್ಥ್ಯಕ್ಕಿಂತ ಅದೀಕಬಾರ ಹಾಕಿ ಏಳೆಯದೆ ಇದ್ದಲ್ಲಿ ಅವುಗಳನ್ನು ಮನಸ ಇಚ್ಚೆ ತಳಿಸಿವುದರ ಮೂಲಕ ಹಿಂಸೆನಿಡುತ್ತಿದ್ದಾರೆ.
ನಗರದ ಮಧ್ಯ ಭಾಗದಲ್ಲಿ ಇರುವ ಹಳ್ಳಕ್ಕೆ ಕಳೆದ ಕೆಲವು ದಿನಗಳಿಂದ ಬರುತ್ತಿರುವ ಮಳೆಯಿಂದಾಗಿ ಹಳ್ಳ ತುಂಬಿ ತುಳುಕುತ್ತದೆ ಜೊತೆಗೆ ಮೇಲ್ ಭಾಗದಲ್ಲಿ ಇನ್ನೂ ಮಳೆ ಆಗುತ್ತಿರುವ ಕಾರಣ ಹಳ್ಳಕ್ಕೆ ಹೆಚ್ಚಿನ ನೀರು ಬರುವ ಸಾಧ್ಯತೆ ಇದೆ ಯಾವುದನ್ನು ಲೆಕ್ಕಿಸದೆ ಎತ್ತಿನ ಮಾಲೀಕರ ಅತಿಯಾದ ಆಸೆಗೆ ಎತ್ತಿನ ಬಂಡಿ ಕಟ್ಟಿ ಕೊಂಡು ಎತ್ತುಗಳಿಗೆ ಕುತ್ತಿಗೆ ಮಟ್ಟಕ್ಕೆ ನೀರು ಬಂದರು. ಜೊತೆಗೆ ತನ್ನ ಪ್ರಾಣವನ್ನು ಲೆಕ್ಕಿಸದೆ ಮರಳು ತುಂಬುತ್ತಿದ್ದು ನೀರಿನಿಂದ ಹೊರಬರಲು ಕಷ್ಟಕರವಾದರು ಬಡಿತ ತಾಳಲಾರದೆ ಹೊರಬರುತ್ತವೆ ಎತ್ತುಗಳಿಗೆ ಬಡಿಯೊದು ನೊಡಿದರೆ ಪ್ರಾಣಿ ಪ್ರಿಯರ ಮನಕಲುಕತ್ತೆ.
ಚಿತ್ರಹಿಂಸೆ ಕೊಡುವ ಮಾಲೀಕರ ವಿರುದ್ಧ ಶಿಸ್ತು ಕ್ರಮಕ್ಕೆ ಅಧಿಕಾರಿಗಳು ಮುಂದಾಗಬೇಕು ಎನ್ನುವುದು ಪ್ರಜ್ಞಾವಂತ ನಾಗರಿಕರು ಮಾತನಾಡುವುದು ಕಂಡು ಬಂದಿದೆ. ಸಂಬಂದ ಪಟ್ಟ ಅಧಿಕಾರಿಗಳ ಕೂಡ ಇವರ ಬಡತನವನ್ನು ಕಂಡು ಮಾನವೀಯತೆ ಆಧಾರದ ಮೇಲೆ ಅಕ್ರಮ ಮರಳು ಸಾಗಾಣಿಕೆ ಯಲ್ಲಿ ತೊಡಗಿದ್ದರು. ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಕಂಡು ಕಾಣದಂತೆ ಇದ್ದಾರೆ.
ಆದರೆ ಅದನ್ನೆ ಬಂಡವಾಳ ಮಾಡಿಕೊಂಡು ಎತ್ತಿನ ಮಾಲೀಕರು ಬಂಡಿಯಲ್ಲಿ ಹತ್ತಾರು ಎತ್ತಿನ ಗಾಡಿಗಳಲ್ಲಿ ಮರಳು ಮಾರಾಟ ಮಾಡ್ತಾಇದ್ದಾರೆ.ಅಧಿಕಾರಿಗಳು ಎತ್ತಿನ ಮಾಲೀಕರ ರಿಂದ ಯಾವ ರೀತಿಯಲ್ಲಿ ಎತ್ತುಗಳನ್ನು ರಕ್ಷಣೆ ಮಾಡುತ್ತಾರೆ ಎನ್ನುವುದು ಕಾದು ನೋಡಬೇಕು.