ಅಪೌಷ್ಟಿಕತೆದೂರವಾಗಿಸಲು ಪೋಷಣಾಅಭಿಯಾನ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ:
ಕೊಪ್ಪಳ ಜಿಲ್ಲೆ:

ಕಾರಟಗಿ:ಸಮುದಾಯ ಆರೋಗ್ಯ ಕೇಂದ್ರ ಕಾರಟಗಿ ವ್ಯಾಪ್ತಿಯ ಕಾರಟಗಿ ಬಿ ಉಪಕೇಂದ್ರದ ರಾಮನಗರದಲ್ಲಿ ಪೋಷಣೆ ಅಭಿಯಾನ ಕಾರ್ಯಕ್ರಮ ಮಾಡಲಾಯಿತು.
ಗರ್ಭಿಣಿಯರಿಗೆ, ಬಾಣಂತಿಯರಿಗೆ, ಚಿಕ್ಕ ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಆಹಾರ ನೀಡಬೇಕು. ಉತ್ತಮ ಆಹಾರದಿಂದಲೇ ಖಾಯಿಲೆಗಳು ಮಾಯವಾಗುತ್ತವೆ. ಈ ನಿಟ್ಟಿನಲ್ಲಿ ಆಹಾರವನ್ನೇ ಔಷಧವನ್ನಾಗಿಸಿಕೊಳ್ಳಬೇಕೆ ಹೊರತು, ಔಷಧಿಯನ್ನು ಆಹಾರವಾಗಿ ಪರಿವರ್ತನೆ ಮಾಡಿಕೊಳ್ಳಬಾರದು ಎಂದು ಆಹಾರ ಇಲಾಖೆಯ ಶ್ರೀಮತಿ ಶಾಂತಾ.ಆರ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಪೌಷ್ಠಿಕ ಆಹಾರದ ಮಹತ್ವದ ಬಗ್ಗೆ ಫಲಾನುಭವಿಗಳಿಗೆ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಲು ಸಲಹೆ, ಸೂಚನೆಗಳನ್ನು ಶ್ರೀಮತಿ ದುರುಗಮ್ಮ ಪ್ರಭಾರಿ ಹಿರಿಯ ಆರೋಗ್ಯ ಸಹಾಯಕರು ತಿಳಿಸಿದರು
ಗರ್ಭಿಣಿಯರು, ಬಾಣಂತಿಯರು, ಶಿಶುವಿನ ಬೆಳವಣಿಗೆ ಕುಂಠಿತ, ತೂಕ ಕೊರತೆ, ರಕ್ತಹೀನತೆ, ಅಪೌಷ್ಟಿಕತೆ, ಕಡಿಮೆ ತೂಕದ ಶಿಶು ಸೇರಿದಂತೆ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವವರನ್ನು ಅದರಿಂದ ಹೊರಕ್ಕೆ ತರಲು ಪೂರಕವಾಗಿ ಇಲಾಖೆಯು ನಾನಾ ಯೋಜನೆಯನ್ನು ಜಾರಿಗೊಳಿಸಿದೆ. ಹಂತ ಹಂತವಾಗಿ ಅಪೌಷ್ಟಿಕತೆ ಮುಕ್ತ ಕರ್ನಾಟಕ ರೂಪಿಸಲು ಉದ್ದೇಶಿಸಿಲಾಗಿದೆ. ಗರ್ಭಿಣಿಯರು, ಬಾಣಂತಿಯರಲ್ಲಿ ಪೌಷ್ಟಿಕಾಂಶಮಟ್ಟ ವೃದ್ಧಿಗಾಗಿ ಮಾತೃಪೂರ್ಣ, ಸೃಷ್ಟಿ ಹಾಗೂ ಕ್ಷೀರಭಾಗ್ಯ ಯೋಜನೆಯನ್ನೂ ಜಾರಿಗೊಳಿಸಿದ್ದು ಈ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಶ್ರೀಮತಿ ರೇಣುಕಾ ಕಿ.ಆ.ಸ ತಿಳಿಸಿದರು
ಈ ಸಂದರ್ಭದಲ್ಲಿ ಉಪಕೇಂದ್ರವಾರು ಕಿರಿಯ ಆರೋಗ್ಯ ಸಹಾಯಕರಾದ ,ಕು.ಸುಮಾ,ಶ್ರೀಮತಿ ಸಾವಿತ್ರಿ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಮಹಾಲಕ್ಷ್ಮಿ,ಶಾಂತಕುಮಾರಿ,ಆಶಾಯರಾದ ಶ್ರೀಮತಿ ಪೂರ್ಣಿಮಾ, ಶ್ರೀಮತಿ ವಿಜಯ ಲಕ್ಷ್ಮಿ ಗರ್ಭಿಣಿಯರು ಸೇರಿ ಕಾರ್ಯಕ್ರಮದಲ್ಲಿ ಇದ್ದರು

Share and Enjoy !

Shares