ವಿಜಯನಗರ ವಾಣಿ ಸುದ್ದಿ
ರಾಯಚೂರು ಜಿಲ್ಲೆ
ಸಿಂಧನೂರು: ಈ ಮಹಾಮಾರಿ ಕೊರೋನ್ ವೈರಸ್ ಬಗ್ಗೆ ಪ್ರತಿಯೊಬ್ಬರೂ ಜಾಗೃತಿ ರಾಗಿ ಮಾಸ್ಕ್ ಧರಿಸಿ,ಗುಂಪುಗುಂಪಾಗಿ ಸೇರುವುದು ಬಿಟ್ಟು,ಸಾಮಾಜಿಕ ಅಂತರ ಕಾಪಾಡಲು ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐ ರಾಘವೇಂದ್ರ ಮನವಿ ಮಾಡಿದರು ..ತಾಲೂಕಿನ ಬಂಗಾರಿ ಕ್ಯಾಂಪ್ ನಲ್ಲಿ ಗ್ರಾಮೀಣ ಪೋಲಿಸ್ ಠಾಣೆಯ ವತಿಯಿಂದ ನನ್ನ ಮಾಸ್ಕ್ , ನನ್ನ ಲಸಿಕೆ ಎಂಬ ಕೊವಿಡ್ ೧೯ ವಿರುದ್ಧ ಜನಾಂದೊಲನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಆಂದೋಲನವನ್ನು ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐ ರಾಘವೇಂದ್ರ ರವರು ಚಾಲನೆ ನೀಡಿದರು.ನಂತರ ಬಂಗಾರಿ ಕ್ಯಾಂಪ್ ಸಾರ್ವಜನಿಕ ಉದ್ದೇಶಿಸಿ ಮಾತನಾಡಿದ ಅವರು ಕೊರೋನ್ ವೈರಸ್ ನಿಂದ ಇಡಿ ಮನುಕುಲದ ಜೀವನದ ಸ್ಥಿತಿ ತುಂಬಾ ಸಂಕಷ್ಟದಲ್ಲಿದ್ದು .ಈ ಮಹಾಮಾರಿ ಕೊರೋನ್ ವೈರಸ್ ಹರಡದಂತೆ ತಡೆಗಟ್ಟಲು ಸರ್ಕಾರ.ಪೋಲಿಸ್ ಇಲಾಖೆ ಸೇರಿದಂತೆ ಇತರೆ ಇಲಾಖೆ ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಅದಕ್ಕೆ ನಾವೆಲ್ಲರೂ ಆರೋಗ್ಯವಂತರಾಗಿ ಇರಬೇಕಾದರೆ ರೈತಾಪಿ ಜನರು. ಗ್ರಾಮಸ್ಥರು ಸೇರಿದಂತೆ ಎಲ್ಲಾ ಜನರು ಮಾಸ್ಕ್ , ಸಾಮಾಜಿಕ ಅಂತರ, ಸ್ವಚ್ಚತಾ ಬಗ್ಗೆ ಜಾಗೃತರಾಗಬೇಕು ,ಹಾಗೆ ಗುಂಪು ಸೇರುವುದು , ಸಾರ್ವಜನಿಕವಾಗಿ ಸಭೆ ಸಮಾರಂಭ ಮಾಡುವಾಗ ಸರ್ಕಾರದ ನಿಯಮಗಳಿಗನುಸಾರವಾಗಿ ಮಾಡಬೇಕು. ಕೊರೋನ್ ವೈರಸ್ ಲಕ್ಷಣ ಕಂಡು ಬಂದರು. ಬರದಿದ್ದರೂ ಪ್ರತಿಯೊಬ್ಬರೂ ಕುಟುಂಬದ ಸದಸ್ಯರ ಆರೋಗ್ಯದ ಹಿತದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು ಸಾರ್ವಜನಿಕ ಆಸ್ಪತ್ರೆ ಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಿ.ನೂರಾರು ಗ್ರಾಮಸ್ಥರಿಗೆ ಮಾಸ್ಕ್ ವಿತರಣೆ ಮಾಡಿದರು.ಈ ಸಂಧರ್ಭದಲ್ಲಿ ಗ್ರಾಮೀಣ ಪೋಲಿಸ್ ಠಾಣೆಯ ಸಿಬ್ಬಂದಿಗಳಾದ ದ್ಯಾಮಣ್ಣ, ಪರಶುರಾಮ. ಸೇರಿದಂತೆ ಬಂಗಾರಿ ಕ್ಯಾಂಪ್ ಗ್ರಾಮಸ್ಥರು, ಮಹಿಳೆಯರು ಸ್ವಯಂಪ್ರೇರಿತ ರಾಗಿ ಜಾಗೃತಿ ಆಂದೋಲನದಲ್ಲಿ ಕೈ ಜೋಡಿಸಿ ಜಾಗೃತಿ ಜನಾಂದೊಲನವನ್ನು ಯಶಸ್ವಿ ಗೊಳಿಸದರು