ವಿಜಯನಗರವಾಣಿ ಸುದ್ದಿ
ಕೊಪ್ಪಳ ಜಿಲ್ಲೆ
ಕನಕಗಿರಿ :ತಾಲೂಕಿನ ಸಮಿಪದ ಈಚನಾಳ ಗ್ರಾಮದ ಹನುಮಂತ ತಂದೆ ದುರುಗಪ್ಪ ಎಂಬುವ ವ್ಯಕ್ತಿ ಸಾಲ ಬಾದ ತಾಳಲಾರದೆ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ರೈತ ಮೂರವರೆ ಎಕರೆ ಸ್ವಂತ ಜಮಿನು ಹೊಂದಿದ್ದ ಆಗಾಗ್ಗೆ ಬೇಳೆ ಕೈ ಕೊಟ್ಟಿದ್ದರಿಂದ ಬ್ಯಾಂಕ್ ಸೇರಿದಂತೆ ಖಾಸಗಿಯವರ ಬಳಿ ಸಾಲ ಮಾಡಿದ್ದರಿಂದ ಸಾಲ ತಿರಿಸಲಾಗದೆ ಮನನೊಂದ ರೈತ ತನ್ನ ಜಮಿನಿನಲ್ಲಿ ವಿಷಸೇವಿಸಿದ್ದಾನೆ ವಿಷಯತಿಳಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಗೆ ಕರೆದು ಕೊಂಡು ಹೊಗುವಾಗ ರಸ್ತೆ ಮಧ್ಯೆ ಮೃತ ಪಟ್ಟಿದ್ದಾನೆಂದು ತಿಳಿದು ಬಂದಿದೆ .
ಮೃತನಿಗೆ ಮೂರು ಹೆಣ್ಣುಮಕ್ಕಳಿದ್ದು ಒಂದು ಗಂಡುಮಗುವಿದೆ ಎಂದು ತಿಳೀದು ಬಂದಿದೆ