ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಮಸ್ಕಿ : ತಾಲ್ಲೂಕಿನ ಹಾಲಪುರ ಗ್ರಾಮದಲ್ಲಿ ಶ್ರೀ ಚಂದೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತವು ಎಲ್ಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರೊಂದಿಗರ ಗ್ರಾಹಕರ ಸಹಕಾರದೊಂದಿಗೆ 2019-2020 ನೇ ಸಾಲಿನಲ್ಲಿ 19 ಲಕ್ಷ ನಿವ್ವಳ ಲಾಭಗಳಿಸಿದೆಂದು ಅಧ್ಯಕ್ಷರಾದ ಶ್ರೀ ಲಿಂಗರಾಜ ಪಾಟೀಲ್ ಹೇಳಿದರು .ಹಾಲಾಪೂರದ ಶ್ರೀ ಚಂದೇಶ್ವರ ಪ.ಸೌ ಸಹಕಾರಿಯ ಆವರಣದಲ್ಲಿ ಏರ್ಪಡಿಸಿದ್ದ 7 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷ ಸ್ಥಾನವಹಿಸಿ ಮಾತನಾಡಿದವರು ಕೋವಿಡ್ -19 ಹಿನ್ನಲೆಯಲ್ಲಿ ಅತ್ಯಂತ ಸರಳರೀತಿಯಲ್ಲಿ ಸಹಕಾರಿ ವಾರ್ಷಿಕ ಸಭೆಯನ್ನು ಹಮ್ಮಿಕೊಂಡಿದ್ದು ಈ ಸಾಲಿನಲ್ಲಿ ಠೇವಣಿ ಸಂಗ್ರಹಣೆ , ಸಾಲ ವಿತರಣೆ , ವಹಿವಾಟು , ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಲಾಗಿದೆ.ಪರಸ್ಪರ ಸಹಕಾರ ಆರ್ಥಿಕ ಪ್ರಗತಿ ಹಿತದೃಷ್ಟಿಯಿಂದ ಪ್ರಾರಂಭಿಸಲಾದ ಶ್ರೀ ಚಂದೇಶ್ವರ ಪತ್ತಿನ ಸಹಕಾರಿ 2020 ಕ್ಕೆ : 1895 ಸದಸ್ಯರೊಂದಿಗೆ ಒಟ್ಟು ಶೇರು ಬಂಡವಾಳ 24.50 ಲಕ್ಷ ಮತ್ತು ಠೇವಣಿ 9.49 ಕೋಟಿ ಹಾಗೂ ದುಡಿಯುವ ಬಂಡವಾಳ 11 ಕೋಟಿ 86 ಲಕ್ಷ ಇದ್ದು , 9 ಕೋಟಿ ಸಾಲ ನೀಡಿರುತ್ತದೆ . ವಿವಿಧ ಬ್ಯಾಂಕ್‌ಗಳಲ್ಲಿ 2 ಕೋಟಿ 78 ಲಕ್ಷಗಳು ಮುದ್ದತಿ ಠೇವಣಿ ತೊಡಗಿಸಿರುವುದು ಸೇರಿದಂತೆ ಉತ್ತಮ ಆರ್ಥಿಕ ವಹಿವಾಟು ನಡೆಸಿದ ಸಹಕಾರಿಯು 19 ಲಕ್ಷ ಲಾಭಗಳಿಸಿರುವುದು ತುಂಬಾ ಹೆಮ್ಮಯ ಸಂಗತಿಯಾಗಿದೆ ಮತ್ತು ಶ್ರೀ ಚಂದೇಶ್ವರ ಪತ್ತಿನ ಸಹಕಾರಿ ಆರ್ಥಿಕ ಪ್ರಗತಿಗೆ ಗ್ರಾಹಕರು ನಡೆಸಿದ ವ್ಯಾಪರ ವಹಿವಾಟು ಸಕಾಲದಲ್ಲಿ ಸಾಲ ಮರುಪಾವತಿಗೆ ಕಾರಣವಾಗಿದೆ ಎಂದುರು …ಈ ಸಂದರ್ಭದಲ್ಲಿ. ಸಹಕಾರಿಯ ಉಪಾಧ್ಯಕ್ಷರಾದ ಶ್ರೀ ಎಂ.ಬಸವರಾಜ ಹಾಗೂ ನಿರ್ದೇಶಕರಾದ ಶ್ರೀ ಆಮರಗುಂಡಪ್ಪ ಹಸ್ಮಕಲ್ , ಶ್ರೀ ವಾಸನಗೌಡ ಮಾಲಿಪಾಟೀಲ್ , ಶ್ರೀ ದೇವರಾಜ ಬಾಗೋಡಿ , ಶ್ರೀ ಚಂದ್ರಶೇಖರ ಪಾಟೀಲ್ , ಶ್ರೀ ಬಸವರಾಜ ಮಾಲಿಪಾಟೀಲ್ , ಶ್ರೀ ವೀರೇಶ ಬಲ್ಲಟಿಗಿ , ಶ್ರೀ ವಿ.ರುದ್ರಮೂರ್ತಿ , ಶ್ರೀ ಶೇಖರಪ್ಪ ಮಾಲಿಪಾಟೀಲ್ , ಶ್ರೀ ಬಸವರಾಜ ಎಮ್ಮಿಗನೂರು , ಶ್ರೀ ವಿಜಯ ಕುಮಾರ ದೊರೆ ಸಹಕಾರಿಯ ಮುಖ್ಯಕಾರ್ಯನಿರ್ವಹಕರಾದ ಶ್ರೀ ಮಲ್ಲಿಕಾರ್ಜುನ , ಹಾಗೂ ಸಿಬ್ಬಂದಿಗಳಾದ ಶ್ರೀ ಪ್ರಸಾದ , ಶ್ರೀ ಬಸವರಾಜ ಮಸ್ಕಿ , ಪಿ ಏಜೆಂಟ್‌ರುಗಳಾದ ಶ್ರೀ ಅಂಬಣ್ಣ , ಶ್ರೀ ಅಮರೇಶ , ಶ್ರೀ ಅವಿನಾಶ ಹಾಗೂ ಬಸವರಾಜ ಪರಿಚಾರಕರು ಇದ್ದರು .