ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ .
ಮಾನ್ವಿ: ಉಪಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಇಂದು ಮಾನ್ವಿ ಮೂಲಕವಾಗಿ ರಾಯಚೂರಿಗೆ ಹೋಗುವ ಸಂದರ್ಭದಲ್ಲಿ ಶಾಸಕ ರಾಜಾವೆಂಟಪ್ಪ ನಾಯಕರು ತಾಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಉಂಟಾದ ಬೆಳೆ ನಷ್ಟ ಮತ್ತು ಮನೆಗಳ ಕುಸಿತಕ್ಕೆ ನಷ್ಟ ಪರಿಹಾರ ನೀಡಬೇಕೆಂದು ಮನವಿ ಸಲ್ಲಿದಿದರು.
ನಂತರ ಸಚಿವರು ತಾಲೂಕಿನ ಚೀಮ್ಲಾಪುರು ಕ್ರಾಸ್ ಬಳಿ ತಮ್ಮ ವಾಹನ ನಿಲ್ಲಿಸಿ ರಸ್ತೆ ಬದಿಯ ಹೊಲಗಳಲ್ಲಿನ ಬೆಳೆಗಳನ್ನು ವೀಕ್ಷಿಸಿದರು.
ರೈತರು ತಮ್ಮ ಹೊಲಗಳಲ್ಲಿ ಬೆಳೆದ ಹತ್ತಿ ಬೆಳೆಯನ್ನು ಕಿತ್ತು ತಂದು ಸಚಿವರಿಗೆ ತೋರಿಸುವ ಮೂಲಕ ಬೆಳೆಗಳ ವಾಸ್ತವ ಸ್ಥಿತಿಯನ್ನು ವಿವರಿಸಿದರು.
ಸತತ ಮಳೆಯಿಂದಾಗಿ ಹತ್ತಿ ಬೆಳೆ ಸೇರಿದಂತೆ ಜೋಳ, ಸಜ್ಜೆ , ಭತ್ತ ಬೆಳೆ ಕೂಡ ನಾಶವಾಗಿದೆ ಎಂದು ಶಾಸಕ ರಾಜಾವೆಂಟಪ್ಪ ನಾಯಕ ಮತ್ತು ಕೃಷಿ ಅಧಿಕಾರಿ ಬಿ.ಹುಸೇನಸಾಬ್ ವಿವರಿಸಿದರು.
ಈ ಸಂದರ್ಭದಲ್ಲಿ ರಾಜಾ ರಾಮಚಂದ್ರ ನಾಯಕ ಜೆಡಿಎಸ್ ಮುಖಂಡರು, ನಾಗರಾಜ ಭೋಗಾವತಿ ವಕ್ತಾರ , ಹನುಮಂತ್ರಾಯ ನಾಯಕ, ಶ್ರೀಧರ ಸ್ವಾಮಿ, ಗೋಪಾಲ್ ನಾಯಕ ಹರವಿ, ಖಲೀಲ್ ಖುರೇಷಿ,ಮೌಲಾಸಾಬ್ ,ಪಿ.ರವಿಕುಮಾರ,ಬಸವರಾಜ ಶೆಟ್ಟಿ ,ಶರಣಪ್ಪ ನಂದಿಹಾಳ,ಮತ್ತು ಜೆಡಿಎಸ್ ಮುಖಂಡರು ಉಪಸ್ಥಿತಿ ಇದ್ದರು .