ಗ್ರಾಮವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ರೋಗಗಳಿಂದ ದೂರವೀರಬೇಕು :ಲಕ್ಷ್ಮೀಪುರ ಮಾಜಿ ಗ್ರಾ. ಪಂ ಮಾಜಿ ಅಧ್ಯಕ್ಷ ಪಿ.ಟಿ.ಭರತ್

 

ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ

ಹರಪನಹಳ್ಳಿ: ಯುವಕರು ಗ್ರಾಮವನ್ನು ಹಾಗೂ ದೇವಸ್ಥಾನವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ರೋಗಗಳಿಂದ ದೂರವೀರಬೇಕು ಎಂದು ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಟಿ.ಭರತ್ ಹೇಳಿದರು
ತಾಲೂಕಿನ ಚೌಡಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಆಂಜನೇಯ ದೇವಸ್ಥಾನ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ
ಹಾಗೂ ಕಳಸಾರೋಹಣ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಜಾರಾಯಿ ಇಲಾಖೆಯ 5ಲಕ್ಷ ರೂಗಳ ವೆಚ್ಚದಲ್ಲಿ ಶ್ರೀ ಆಂಜನೇಯ ಸ್ವಾಮಿಯ ನೂತನ ದೇವಸ್ಥಾನದ ಕಳಸಾರೋಹಣವನ್ನು ನೇರವೇರಿಸಿಲಾಗಿದ್ದುನಾಡಿನಲ್ಲಿ ಸಾಕಾಲದಲ್ಲಿ ಮಳೆ, ಬೆಳೆ ಚನ್ನಾಗಿ ಆಗುವ ಮೂಲಕ ರೈತರ ಬದುಕು ಹಸನಾಗಬೇಕು ಎಂದು ನಮ್ಮಲ್ಲೆರ ಆಶಯವಾಗಿದೆ ಎಂದರು.
ವಾಲ್ಮೀಕಿ ನಾಯಕ ಸಮಾಜದ ಅದ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ ವೈಜ್ಞಾನಿಕವಾಗಿ ಎಷ್ಟೆ ಮುಂದುವರೆದರು ಕೂಡ ಸಂಪ್ರಾದಾಯಗಳು, ಭಕ್ತಿಗೆ ಈ ತಾಲೂಕಿನಲ್ಲಿ ಕಡಿಮೆ ಇಲ್ಲ. ಸರ್ವಜನಾಂಗದವರು ಒಂದೇ ಕುಟುಂಬದವರು ಎನ್ನುವ ಭಾವನೆಯಲ್ಲಿ ಜೀವನ ನಡೆಸಬೇಕು ಎಂದ ಅವರು ದೇವಸ್ಥಾನ ನಿರ್ಮಾಣ ಮಾಡುವುದು ದೊಡ್ಡದಲ್ಲ, ಅದರ ನಿರ್ವಹಣೆ, ಸುಚಿತ್ವ ಕಾಪಾಡಿಕೊಂಡು ನಿತ್ಯ ಪೂಜೆ, ಪುನಸ್ಕಾರದಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯ ಸಿಂಗ್ರಿಹಳ್ಳಿ ಟಿ. ನಾಗರಾಜ, ಸಿಂಗ್ರಿಹಳ್ಳಿ ಗ್ರಾ.ಪಂ.ಮಾಜಿ ಅದ್ಯಕ್ಷ. ಟಿ. ಶಿವಪ್ಪ, ಗ್ರಾ.ಪಂ.ಸದಸ್ಯ ಕೆಂಚಪ್ಪ, ಗೊಲ್ಲರ ಹಟ್ಟಿ ದಾಸಪ್ಪ, ನಿವೃತ್ತ ಮುಖ್ಯ ಶಿಕ್ಷಕ ಎಂ.ಆನಂದಪ್ಪ ಮುಖಂಡರಾದ ಷಣ್ಮುಖಪ್ಪ, ದೇವೆಂದ್ರಪ್ಪ..ಮೈದೂರು ಮಾರುತಿ, ಪಿ.ಡಿ.ಓ.ಚಂದ್ರಪ್ಪ. ಗ್ರಾ.ಪಂ.ಸದಸ್ಯ ಕಿಮ್ಯನಾಯ್ಕ, ಉಪಸ್ಥಿತರಿದ್ದರು.

Share and Enjoy !

Shares