ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಸಿಂಧನೂರು: ಈ ಮಹಾಮಾರಿ ಕೊರೋನ್ ವೈರಸ್ ಬಗ್ಗೆ ಜನರು ಜಾಗೃತಿ ರಾಗಿ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳುವ ಮೂಲಕ ಕೊರೋನ್ ವೈರಸ್ ಹರಡದಂತೆ ತಡೆಗಟ್ಟಬಹುದು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ
ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ “ಆರೋಗ್ಯ ಹಸ್ತ ” ಕೋವಿಡ್-19
ತಪಾಸಣೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಕೋವಿಡ್ ಟೆಸ್ಟ್ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು.
ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಧಿಕಾರಿ ಡಾ! ನಾಗರಾಜ ಪಾಟೀಲ್ ಮಾತನಾಡಿ ಕೊರೋನ್ ವೈರಸ್ ಜನರು ತುಂಬಾ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೊರೋನ್ ವೈರಸ್ ಬಗ್ಗೆ ಯಾವ ಒಬ್ಬ ವ್ಯಕ್ತಿ ನಿರ್ಲಕ್ಷ್ಯ ವಹಿಸಿ ಬಾರದು. ಪ್ರತಿಯೊಬ್ಬರೂ ಕೋವಿಡ್ ಟೆಸ್ಟ್ ಮಾಡಿಸಬೇಕು. ನಿಮಗೆ ಕೊರೋನ್ ವೈರಸ್ ಪಾಸಿಟಿವ್ ಬಂದರೆ ನಿಮ್ಮ ಮನೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಕೊರೋನ್ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು.ಜನರಲ್ಲಿ ಜಾಗೃತಿ ಮಾಡಿಸಬೇಕು. ಜನರು ಉತ್ತಮ ಪೌಷ್ಟಿಕ ಆಹಾರ ಸೇವನೆ ಮಾಡಿ. ಸಮಾಜಿಕ ಅಂತರ ಕಾಪಾಡಿ. ಮಾಸ್ಕ್ ಧರಿಸುವ ಮೂಲಕ ಜನರು ಸ್ವತಃ ತಾವೇ ಜಾಗೃತಿ ರಾಗಿ ಜನರೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ , ಡಾ! ಜಿಗ್ನೇಶ, ಎಚ್.ಎನ್.ಬಡಿಗೇರ, ಶೇಖರಪ್ಪ ಗಿಣಿವಾರ,ಶ್ರೀನಿವಾಸ ಚಿಟ್ಟಿ, ಹೆಚ್.ಹುಸೇನ್ ಬಾಷ, ಶಬಿರ್, ಛತ್ರಪ್ಪ ಕೆ, ಜಾಪರ್ ಅಲಿ ಜಾಗಿರಾದ_ ಎಸ್. ಶರಣೇಗೌಡ. ಹನುಮಂತ ರೆಡ್ಡಿ. ಮಹೆಬೂಬ್, ಮುನಿರ್ ಪಾಷ, ಸೇರಿದಂತೆ ಅನೇಕರು ಭಾಗವಹಿಸಿದರು