ಸಂಗೋಳಿ ರಾಯಣ್ಣ ಮೂರ್ತಿಯನ್ನು ಮರು ಸ್ಥಾಪನೆ ಮಾಡುವಂತೆ ಯುವ ಕುರುಬರ ಸಂಘದಿಂದ ಒತ್ತಾಯ.

Share and Enjoy !

Shares

 

ವಿಜಯನಗರವಾಣಿ ಸುದ್ಧಿ.
ರಾಯಚೂರು ಜಿಲ್ಲೆ .
ಮಾನ್ವಿ : ಗದಗ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಅ.೧೭ ರಂದು ಸ್ವಾತಂತ್ರ್ಯ
ಸೇನಾನಿ ಕ್ರಾಂತಿವೀರ ಸಂಗೋಳ್ಳಿರಾಯಣ್ಣ ಮೂರ್ತಿಯನ್ನು ತೆರವುಗೂಳಿಸಿದ್ದಲ್ಲದೇ ನಮ್ಮ ಸಮಾಜದವರ ಮೇಲೆ ಎಫ್.ಐ.ಅರ್ ದಾಖಲು ಮಾಡಿದ್ದು. ಈಗ ಸಂಗೋಳ್ಳಿ ರಾಯಣ್ಣ ಮೂರ್ತಿಯನ್ನು ಮರುಸ್ಥಾಪನೆ ಮಾಡಿ ನಮ್ಮ ಸಮಾಜದವರ ಮೇಲೆ ಹಾಕಿರುವ ಎಫ್ .ಐ.ಅರ್ ರದ್ದುಗೂಳಿಸುವಂತೆ ಮಂಗಳವಾರ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ತಾಲೂಕ ಸಮಿತಿಯು ಶನಿವಾರ ತಹಸೀಲ್ದಾರಗೆ ಮನವಿ ಸಲ್ಲಿಸಿದರು.ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಅವರ ಕುತಂತ್ರದ ನಡೆಯಿಂದ ಅಧಿಕಾರದ ಮಧದಲ್ಲಿ ಪೋಲಿಸ್ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡು ಕೋಮು ಹಾಗೂ ಜಾತಿ ಜಾತಿಗಳ ನಡುವೆವಿಷ ಬೀಜ ಬಿತ್ತಲು ಕುಮ್ಮಕ್ಕು ನೀಡಿದ್ದಾರೆ ಎಂದು ಅರೋಪಿಸಿದರು.

ಕುರುಬ ಸಮಾಜದ ಮೇಲೆ ಹಾಗೂ
ಸ್ವಾತಂತ್ರ್ಯ ಸೇನಾನಿಯ ಮೇಲೆ ದ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರೆ. ಸಂವಿಧಾನವನ್ನು
ದಿಕ್ಕರಿಸಿ ಮೂರ್ತಿ ಧ್ವಂಸ ಮಾಡಲು ಬಹಿರಂಗ ಹೇಳಿಕೆ ನೀಡಿದ ಸಚಿವರ ನಡೆಯನ್ನು ಖಂಡಿಸುತ್ತೇವೆ ಕೂಡಲೇ
ಸಂಗೋಳ್ಳಿ ರಾಯಣ್ಣ ಮೂರ್ತಿಯನ್ನು ಮರುಸ್ಥಾಪನೆ ಮಾಡಿ ನಮ್ಮ ಸಮಾಜದವರ ಮೇಲೆ ಹಾಕಿರುವ ಎಫ್ .ಐ.ಅರ್ ರದ್ದುಗೂಳಿಸುಬೇಕು ಇಲ್ಲವಾದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಹಾಗೂ
ಎಲ್ಲಾ ತಾಲೂಕುಗಳು, ಕುರುಬ ಸಮಾಜದ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು,
ದಲಿತ ಸಂಘಟನೆಗಳು ಹಾಗೂ ಇನ್ನಿತರ ಜ್ಯಾತ್ಯಾತೀತ ಸಂಘಟನೆಗಳ
ಕರ್ನಾಟಕದಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು. ಎಂದು ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Share and Enjoy !

Shares