ರಾಯಣ್ಣ ಮೂರ್ತಿ ಧ್ವಂಸ ಮತಾಂಧ ಹಾಗೂ ಹಿಂದುಳಿದ ವರ್ಗಗಳ ವಿರೋಧಿ ಸಚಿವ C.C ಪಾಟೀಲ್ ನಡೆಗೆ ಖಂಡನೆ:-ಅಮರೇಶ ಸೇರಿ ಚಿಂಚೋಡಿ

Share and Enjoy !

Shares

 

ವಿಜಯನಗರ ವಾಣಿ
ರಾಯಚೂರು ಜಿಲ್ಲೆ

ದೆವದು೯ಗ .ದಿನಾಂಕ 17-10-2020 ರಂದು ಗದಗ ಜಿಲ್ಲೆಯ ಬಳಗಾನೂರು ಗ್ರಾಮದಲ್ಲಿ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ ಪಾಟೀಲ್ ಅವರ ಕುತಂತ್ರದ ನಡೆಯಿಂದ ಅಧಿಕಾರದ ಮದದಲ್ಲಿ ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡು ಕೋಮು ಹಾಗೂ ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತಲು ಕುಮ್ಮಕ್ಕು ನೀಡಿದ್ದಾರೆ. ಸ್ಥಳೀಯ ಆಡಳಿತದಿಂದ (ಗ್ರಾಮ ಪಂಚಾಯಿತಿ) ಎಲ್ಲಾ ದಾಖಲಾತಿ ಸಾವಿಧಾನಿಕವಾಗಿ ಹೊಂದಿದ್ದರೂ ಕುರುಬ ಸಮಾಜದ ಮೇಲೆ ಹಾಗೂ ಸ್ವಾತಂತ್ರ್ಯ ಸೇನಾನಿಯ ಮೇಲೆ ದ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರೆ. ಸಂವಿಧಾನವನ್ನು ಧಿಕ್ಕರಿಸಿ ಮೂರ್ತಿ ಧ್ವಂಸ ಮಾಡಲು ಬಹಿರಂಗ ಹೇಳಿಕೆ ನೀಡಿದ ಸಚಿವರ ನಡೆಯನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಖಂಡಿಸುತ್ತದೆ. ನನಗೆ ಚುನಾವಣೆಯಲ್ಲಿ ಅಹಿಂದ ಸಮಾಜದ ಮತಗಳು ಬಂದಿಲ್ಲ ಎಂಬ ಕಾರಣಕ್ಕೆ ಸಚಿವರು ಈ ಕುತಂತ್ರವನ್ನು ನಡೆಸಿದ್ದಾರೆ. ಈ ಮೊದಲಿನಿಂದಲೂ ಸಿ.ಸಿ ಪಾಟೀಲರವರು ಹಿಂದೂಳಿದ,ದಲಿತ ಹಾಗೂ ಅಲ್ಪಸಂಖ್ಯಾತರ ವಿರೋಧಿ ನಡೆಯನ್ನು ಅನುಸರಿಸುತ್ತಾ ಬಂದಿದ್ದಾರೆ. ಬಳಗಾನೂರ ನಿನ್ನೆಯ ಘಟನೆ ಇದಕ್ಕೊಂದು ಸತ್ಯ ನಿದರ್ಶನ. ಇವರು ಈಗ ಕರ್ನಾಟಕ ಸರ್ಕಾರದಲ್ಲಿ ಮಂತ್ರಿ ಯಾಗಬೇಕಾದರೆ ಕುರುಬ ಸಮಾಜದ ಪಾತ್ರ ಮುಖ್ಯ ಎಂಬುದನ್ನು ಸಚಿವರು ಅರ್ಥಮಾಡಿಕೊಳ್ಳಬೇಕು. ರಾಜಕೀಯ ಕುತಂತ್ರದಿಂದ ಅಧಿಕಾರದ ದರ್ಪದಿಂದ, ದೌರ್ಜನ್ಯ ಮೂಲಕ, ಪೊಲೀಸರನ್ನು ಬಿಟ್ಟು ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ತೆರವುಗೊಳಿಸಿರುವದು ಸಾವಿಧನದ ವಿರೋಧಿ ನಡೆ. ಒಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ಆದ ಅವಮಾನ. ಅಮಾಯಕ ಜನರ ಮೇಲೆ ಮತ್ತು ಸಂಘಟನಾಕಾರರ ಮೇಲೆ ಮನಬಂದಂತೆ ಲಾಟಿಚಾರ್ಜ್ ಮಾಡಿಸಿ.
ಸಚಿವರ ಮಾತು ಕೇಳಿಕೊಂಡು ಪೊಲೀಸರು ದೌರ್ಜನ್ಯ ಮೆರೆದಿದ್ದಾರೆ. ಪೊಲೀಸ್ ಇಲಾಖೆ ಮೇಲೆ ನನಗೆ ಅತ್ಯಂತ ಗೌರವವಿದೆ. ಆದರೆ ಅಧಿಕಾರದ ಮದದಲ್ಲಿ ಇರುವವರ ಮಾತು ಕೇಳಿಕೊಂಡು ದೌರ್ಜನ್ಯ ಮೆರೆಯುವುದು ತಪ್ಪು ಎಂದು ನಾನು ಇಲಾಖೆಗೆ ಕಿವಿ ಮಾತು ಹೇಳಬಯಸುತ್ತೇನೆ. ಕನ್ನಡಿಗನಾಗಿ ನಾನು ಹೇಳುವುದೇನೆಂದರೆ ನಿಮ್ಮ ದರ್ಪ ದೌರ್ಜನ್ಯ ಏನಿದ್ದರೂ ಕನ್ನಡಿಗರ ಭಾವನೆ ಕೆರಳಿಸುವ ಮರಾಠ ಪುಂಡರ ಮೇಲೆ ತೋರಿಸಿ ಕನ್ನಡಿಗರ ಮೇಲೆ ಅಲ್ಲಾ
.2-3 ದಿನದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸದಿದ್ದರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು, ಕುರುಬ ಸಮಾಜ ಸಂಘಟನೆಗಳು, ಕನ್ನಡಪರ ವಿವಿಧ ಸಂಘಟನೆಗಳು,ದಲಿತ ಸಂಘಟನೆಗಳು ಹಾಗೂ ಇನ್ನಿತರ ಜಾತ್ಯಾತೀತ ಸಂಘಟನೆಗಳ ಮೂಲಕ ಕರ್ನಾಟಕದಾದ್ಯಂತ ಉಗ್ರ ಹೋರಾಟದ ಪ್ರತಿಭಟನೆ ಮಾಡಲಾಗುವುದು. ಸರಕಾರದ ಮತ್ತು ಸಚಿವರ ಜಾತಿವಿರೋಧಿ ನಡೆಯನ್ನು ಖಂಡಿಸಿ ಸಚಿವ ಸ್ಥಾನದಿಂದ ಕೈ ಬಿಡಬೇಕು ಎಂದು ಜಾತಿ ವಿರೋಧಿ ಜನಜಾಗೃತಿ ಮೂಡಿಸಲಾಗುವದು ಎಂದು ದೇವದುರ್ಗ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳಿಂದ ಕಂಡಿನಿಯಾ ಎಂದು ಅಮೇರೆಶ ಅವರು ತಿಳಿಸಿದ್ದಾರೆ.

Share and Enjoy !

Shares