ಅಮರೇಶ ಬಿರಾದಾರ ಅಮಾನತ್ತಿಗಾಗಿ ದಲಿತ ಪರ ಹೋರಾಟ ,ಹೋರಾಟಗಾರರನ್ನು ಬಂದಿಸಿದ ಪೊಲೀಸ್ ಅಧಿಕಾರಿಗಳು.

Share and Enjoy !

Shares
Listen to this article

ವಿಜಯನಗರವಾಣಿ.

ರಾಯಚೂರು ಜಿಲ್ಲೆ.

ಮಾನ್ವಿ :ತಾಲೂಕು ತಹಶಿಲ್ದಾರರ ಅಮರೇಶ್ ಬಿರಾದಾರಾ ಅವರು ತಮ್ಮ ಕಛೇರಿಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಜಿಲ್ಲೆಯಾದ್ಯಂತ ತೀವ್ರ ಚಚೆ೯ಗೆ ಗ್ರಾಸವಾಗಿದೆ. ಇಂದು ಮಾನ್ವಿಯ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಡಿ.ಸಿ.ಕಛೇರಿಯವರೆಗೆ ಪಾದಯಾತ್ರೆ ಯನ್ನು ಹಮ್ಮಿಕೊಂಡಿದ್ದರು.ಆದರೆ ಅವರ ಪ್ರತಿಭಟನೆ ಪಾದಯಾತ್ರೆಗೆ ಪೊಲೀಸ್ ಇಲಾಖೆಯು ಅನುಮತಿ ಕೊಡದೆ ಹೋರಾಟಗಾರರನ್ನು ಬಂದಿಸಿದ್ದಾರೆ.ಇದಕ್ಕೆ ದಲಿತಪರ ಸಂಘಟನೆಗಳು ಪೊಲೀಸ್ ಇಲಾಖೆಯ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಆಡಳಿತವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಜಿಲ್ಲಾಡಳಿತಕ್ಕೆ ನಾಚಿಕೆಯಾಗಬೇಕು ಆರೋಪಿಯನ್ನು ಬಂದಿಸುವ ಬದಲು ಜಿಲ್ಲಾಡಳಿತ ಅವರ ರಕ್ಷಣೆಗೆ ನಿಂತಿರುವುದು ವಿಪಯ೯ವಾಗಿದೆ.ಹೋರಾಟವನ್ನು ಹತ್ತಿಕ್ಕುವಂತಹ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ದಿಕ್ಕಾರ ಕೂಗಿದರು.ಇನ್ನೂ ಜನಸಾಮಾನ್ಯರಿಗೆ ನ್ಯಾಯ ಸಿಗುವುದು ದೂರದ ಮಾತಾಗಿದೆ.ಹೋರಾಟದಲ್ಲಿ ಸುಮಾರು ನೂರಾರು ಹೋರಾಟ ಗಾರರು ಬಾಗವಹಿಸದ್ದರು.ಅವರಲ್ಲನ್ನು ಪೊಲೀಸ್ ಅಧಿಕಾರಿಗಳು ಬಂದಿಸಿದ್ದಾರೆ.

Share and Enjoy !

Shares