ಅಂಗನವಾಡಿ ಕಾರ್ಯಕರ್ತೆಯಾದ ಶಾಂತಮ್ಮ ನೆರಬೆಂಚಿಯವರನ್ನು ಅಮನಾತುಮಾಡಲು ಒತ್ತಾಯ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸೂಗೂರು: ಅಂಗನವಾಡಿ ಆಹಾರ ಧಾನ್ಯಗಳನ್ನು ತೆಗೆದುಕೊಂಡು ಒಯ್ಯುವಾಗ ಸಿಕ್ಕಿಬಿದ್ದ 3 ನೇ ಅಂಗನವಾಡಿ ವ್ಯಾಪ್ತಿಯಲ್ಲಿ ಬರುವ ತೊಂಡಿಹಾಳ ಗ್ರಾಮದ 3 ನೇ ಅಂಗನವಾಡಿ ಕಾರ್ಯಕರ್ತೆಯಾದ ಶಾಂತಮ್ಮ ನೆರಬೆಂಚೆ ಅವರು ದಿನಾಂಕ 18-10-202C ರಂದು ರವಿವಾರ ಇದ್ದರೂ ಕೂಡಾ 3 ನೇ ಅಂಗನವಾಡಿ ತಮ್ಮ ಸಹಾಯಕಿಯ ಜೊತೆ ಬಂದು ಅಂಗನವಾಡಿಯಲ್ಲಿನ ಆಹಾರ ಧಾನ್ಯಗಳನ್ನು ತೆಗೆದುಕೊಂಡು ಹೊಗುವಾಗ ಗ್ರಾಮಸ್ಥರು ಕೈಗೆ ಸಿಕ್ಕಿಬಿದ್ದಿದ್ದಾರೆಂದು ಆರೋಪಿಸಿ ಗ್ರಾಮಸ್ಥತ ಆರೊಪವಾಗಿದ್ದು … ಅಂಗನವಾಡಿಗೆ ಬಂದಾಗಿನಿಂದಲೂ ಪ್ರತಿದಿನ ದವಸ ಧಾನ್ಯಗಳನ್ನು ಕದಿಯುತ್ತಿದ್ದರು ನಾವುಗಳು ಸಾಕ್ಷಿ ಸಮೇತ ಕಾರ್ಯಕರ್ತೆಯ್ಯನು ಹಿಡಿದ್ದೇವೆ ಈಗಾಗಲೇ ಈ ಕಾರ್ಯಕರ್ತೆ ಬೇರೆ ಅಂಗನವಾಡಿಯಿಂದ ದೂರಿನ ಮೇರೆಗೆ ಈ ಅಂಗನವಾಡಿ ಬಂದಿದ್ದಾರೆ ಇಲ್ಲಿಯೂ ಸಹ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಮಕ್ಕಳಗೆ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ನೀಡಬೇಕಾದ ಪೌಷ್ಟಿಕ ಆಹಾರವನ್ನು ಅಂಗನವಾಡಿ ಕಾರ್ಯಕರ್ತೆ ಕಳುವು ಮಾಡಿದ್ದು ಸರ್ಕಾರಕ್ಕೆ ಮಾಡುವ ದ್ರೋಹವಾಗಿದೆ ಆದ್ದರಿಂದ ಈ ಶಾಂತಮ್ಮ ನೆರಬೆಂಚಿಯವರನ್ನು ಕರ್ತವ್ಯದಿಂದ ವಜಾ ಮಾಡಬೇಕೆಂದು ತಾವುಗಳು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರುವನೀಡಲಾಗುವುದು ದೂರಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ದೇವದಾಸಿ ಮಹಿಳಾ ಸಂಘ ತಾಲ್ಲೂಕು ಗೌರವ ಅಧ್ಯಕ್ಷರಾದ ಪರಶುರಾಮ ಹಲ್ಕಾವಾಟಗಿ ಹುಸೇನಮ್ಮ ಯಮುನಮ್ಮ ಬಾಳಮ್ಮ ಶಿವಪ್ಪ ದೇವಪ್ಪ ಹುಲಿಗೆಮ್ಮ ದುರುಗಮ್ಮ ತಿಮ್ಮಮ್ಮ ಗದ್ದೆಪ್ಪ ಪವಾಡೆಪ್ಪ ಶ್ರೀದೇವಿ ಯಮನಮ್ಮ ಕರಿಯಪ್ಪ ಗ್ರಾಮಸ್ಥರಿದ್ದರು

Share and Enjoy !

Shares