ಕಾಚಾಪುರ ಗ್ರಾಮದಲ್ಲಿ ಅಕ್ರಮವಾಗಿ ಬೇಳೆದ 54 ಗಾಂಜಾ ಗಿಡ ವಶ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಮಸ್ಕಿ :ತಾಲ್ಲೂಕಿನ ಕಾಚಾಪುರ ಗ್ರಾಮದಲ್ಲಿ ಕಾನೂನು ಬಾಹಿರವಾಗಿ 4 ಕಡೆ ಹೊಲದಲ್ಲಿ ಬೆಳೆದಿದ್ದ 54 ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ .
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾಯಚೂರು ಅಬಕಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ , ರಾಯಚೂರು ವಲಯದ ಅಬಕಾರಿ ಅಧಿಕಾರಿ ಹನುಮಂತ ವಿ.ಗುತ್ತೇದಾರ್ ಹಾಗೂ ಮಾನ್ವಿ ವಲಯದ ನಿರೀಕ್ಷಕರಾದ ಶೈಲಜಾ ರಾಯಚೂರು ನೇತೃತ್ವದಲ್ಲಿ ಕಾಚಾಪುರ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಕಾನೂನುಬಾಹಿರವಾಗಿ ಹೊಲದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ .
ಆದರೆ ಹೊಲದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಅಪರಾಧಿಗಳು ಮಾತ್ರ ಅಬಕಾರಿ ಅಧಿಕಾರಿಗಳ ಕೈಗೆ ಸಿಗದೆ ಪರಾರಿಯಾಗಿದ್ದಾರೆ . ಆದಾಗ್ಯೂ ಈ ಬಗ್ಗೆ ಹೇಳಿಕೆ ನೀಡಿರುವ ರಾಯಚೂರು ಅಬಕಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಕಾಚಾಪುರ ಗ್ರಾಮದಲ್ಲಿ ಕಾನೂನುಬಾಹಿರವಾಗಿ ಹೊಲದಲ್ಲಿ ಗಾಂಜಾ ಗಿಡಗಳನ್ನು ಬೆಳೆದು ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಶೀಘ್ರವೇ ಬಂಧಿಸಿ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುತ್ತದೆ ” ಎಂದು ಸ್ಪಷ್ಟಪಡಿಸಿದರು .

Share and Enjoy !

Shares