ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ 4ಲಕ್ಷ ರೂ.ಮೌಲ್ಯದ ಗಾಂಜಾ ವಶ:

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ

ಸಿರುಗುಪ್ಪ : ಸಿರುಗುಪ್ಪ ತಾಲ್ಲೂಕಿನ ಹಾಳಮುರವಣಿ ಗ್ರಾಮದಲ್ಲಿ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು ಗ್ರಾಮದ ಹೊಲವೊಂದರಲ್ಲಿ ಶುಕ್ರವಾರ ದಾಳಿ ನಡೆಸಿ ಬೆಳೆದಿದ್ದ 4ಲಕ್ಷ ರೂ.ಮೌಲ್ಯದ ಗಾಂಜಾ ಬೆಳೆ ವಶಪಡಿಸಿಕೊಂಡಿದೆ.ಸಾಗುವಳಿ ಮಾಡುತ್ತಿದ್ದ ರೈತನ ಮೇಲೆ ಸಿರಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಾಳಮುರವಣಿ ಸೀಮೆಯ ಸರ್ವೆ ನಂ-37/ಬಿ/2ರ ಮಾಲೀಕರಾದ ಕಾಳಪ್ಪ ದೊಡ್ಡ ಈರಣ್ಣ ಅವರು ಸಾಗುವಳಿ ಮಾಡುತ್ತಿರುವ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾಗಳು ಒಟ್ಟು 31.700ಕಿ‌.ಗ್ರಾಂ (54 ಗಿಡಗಳು) ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಜಂಟಿ ಆಯುಕ್ತರು(ಜಾ&ತ) ನಿರ್ದೇಶನದ ಮೇರೆಗೆ ಮತ್ತು ಬಳ್ಳಾರಿ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ
ಅಬಕಾರಿ ಉಪ ಅಧೀಕ್ಷಕ ಬಿ.ಹೆಚ್.ಪೂಜಾರ್ ನೇತೃತ್ವದಲ್ಲಿ ಹಾಗೂ ಸಿರಗುಪ್ಪ
ತಹಶೀಲ್ದಾರ ಕೂಡಲಗಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಅಬಕಾರಿ ನಿರೀಕ್ಷಕರುಗಳಾದ ಬಿ.ಆಂಜನೇಯ, ಪ್ರಹ್ಲಾದ್ ಆಚಾರ್, ಅಬಕಾರಿ ಉಪ ನಿರೀಕ್ಷಕರರಾದ ಶಂಕರ್ ಗುಡದಾರ್ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಅತ್ಯಂತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬೆಳೆದಿದ್ದ ಗಾಂಜಾ‌ ಬೆಳೆವಶಪಡಿಸಿಕೊಂಡಿದೆ ಸಿರಗುಪ್ಪ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share and Enjoy !

Shares