ಯುವಕರಿಗೆ ಡಾ. ಬಿ. ಆರ್. ಅಂಬೇಡ್ಕರ್ ಭಗತ್ ಸಿಂಗ್ ಆದರ್ಶ ಪಾಲಿಸಿ :ಡಾ. ಶರಣಬಸವ ಹಿರೇರಾಯಕುಂಪಿ

ವಿಜಯನಗರವಾಣಿ

ದೇವದುರ್ಗ . ಭಾರತೀಯ ಕ್ರಾಂತಿಕಾರಿ ಯುವ ಜನ ಸಂಘv ಟನೆ (RYFI) ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಯ ಘಟಕ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು

ಈ ಸಂದರ್ಭದ ಸಬೆ ಆರಂಭಕ್ಕೂ ಮುನ್ನ ರೈತ ಹೋರಾಟಗಾರರು ಕಾ.ಮಾರುತಿ ಮಾನ್ಪಡೆಯವರ ಗೌರವ ಶ್ರದ್ಧಾಂಜಲಿ ಸಲ್ಲಿಸಿಲಾಯಿತು. ನಂತರ ಮಾತನಾಡಿದ ಕಲ್ಯಾಣಾ ಕರ್ನಾಟಕದ ಉಸ್ತುವಾರಿಗಳಾದ ಶ್ರೀ ಡಾ. ಶರಣಬಸವ ಹಿರೇರಾಕುಂಪಿ ಅವರು ನಮ್ಮ ಭಾರತ ದೇಶವು ಆರ್ಥಿಕ ಸಂಕಷ್ಟದಲ್ಲಿದೆ GDP ಕುಸಿತಾ ಇದೆ ಉದ್ಯೋಗಗಳು ಸೃಷ್ಟಿಯಾಗುತಿಲ್ಲ ಯುವಕರನ್ನು ಆಳುವ ವರ್ಗದ ಪಕ್ಷಗಳು ದಾರಿ ತಪ್ಪಿಸುತ್ತಿವೆ ಹಾಗಾಗಿ ಯುವಕರು ತಮ್ಮ ಮುಂದಿನ ಭವಿಷ್ಯಕ್ಕಾಗಿ ಜಾಗೃತರಾಗಬೇಕಾಗಿದೆ ಭಗತಸಿಂಗ್ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ನಾಯಕರ ಆದರ್ಶಗಳನ್ನು ಪಾಲಿಸಲು ಕರೆ ನೀಡಿದರು. ತಾಲೂಕ್ ಅಧ್ಯಕ್ಷರಾದ ಶ್ರೀ ಬಿ.ನಾಗರಾಜ ಶಾವಂತಗೇರಾ ಅವರು ಮಾತನಾಡಿ ಉದ್ಯೋಗವನ್ನರಿಸಿ ಯುವಕರು ಗೂಳೆ ಹೋಗುವಂತಹ ಪರಸ್ಥಿತಿ ಜಾಸ್ತಿಯಾಗಿದೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ದೇವದುರ್ಗ ತಾಲೂಕಿನಲ್ಲಿ RYFI ಸಂಘಟನೆ ಅವಶ್ಯಕತೆ ಇದೆ ಮುಂದಿನಕ್ರಮ ಕೈಗೋಳ್ಳಲು ಹೋರಾಟಕ್ಕೆ ಯುವಕರ ಪಡೆಯು ಜನಸಾಗರದಂತ್ತೆ ಹರಿದು ಬರಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಪ್ರಭು ಹೇಮನಾಳ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಸಿದ್ದಲಿಂಗ ಕಾಕರಗಲ್ ಮತ್ತು ಮಲ್ಲಿಕಾರ್ಜುನ ಹಳೆಮನಿ ಹಾಗೂ ಜಾಲಹಳ್ಳಿ ಹೋಬಳಿಯ ಎಲ್ಲ ಹಳ್ಳಿಯ ಯುವಕರು ಪ್ರಗತಿಪರ ಚಿಂತಕರು ಈ ಭಾಗವಹಿಸಿದ್ದರು

Share and Enjoy !

Shares