ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ :
ಮಸ್ಕಿ : ಪಟ್ಟಣದಲ್ಲಿ ಇಂದು ಆರ್.ಬಸವನಗೌಡ ತುರ್ವಿಹಾಳ ಇತ್ತೀಚಿಗೆ ಮಸ್ಕಿ ಹಳ್ಳಕ್ಕೆ ಕೊಚ್ಚಿಹೋದ ಯುವಕ ಚನ್ನಬಸವ ಮಡಿವಾಳ ಕುಟುಂಬಕ್ಕೆ ವೈಯಕ್ತಿಕವಾಗಿ 50,000 ರೂ ಗಳನ್ನು ನೀಡಿ ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಿದರುಈ ಸಂದರ್ಭದಲ್ಲಿ ಮಾತನಾಡಿದ ಅವರುಸ್ಥಳೀಯ ಸರಕಾರ ಮತ್ತು ಆಡಳಿತ ವರ್ಗ ನೀರಿನಲ್ಲಿ ಕೊಚ್ಚಿಹೋದ ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸರಕಾರದ ವತಿಯಿಂದ ನೊಂದ ಕುಟುಂಬಕ್ಕೆ ಸರಿಯಾದ ಕ್ರಮದಲ್ಲಿ ನೆರವಿಗೆ ಧಾವಿಸಬೇಕು ಎಂದು ತಿಳಿಸಿದರು. ಮುಂಬರುವ ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಶತ ಸಿದ್ಧ ಈಗಾಗಲೇ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡು ನಮ್ಮ ಕೆಲಸ ಕಾರ್ಯಗಳ ಕುರಿತು ಜನಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಇನ್ನೂ ಅನೇಕ ರೀತಿಯಲ್ಲೂ ಸುಲಭವಾಗಿ ಜನಗಳಿಗೆ ತಲುಪುವ ಕೆಲಸ ಆಗಲಿ ಎಂದರು.ಈ ವೇಳೆ ಸಿದ್ದಣ್ಣ ಹುವಿನಭಾವಿ , ತಾ,ಪ ಅಧ್ಯಕ್ಷ ಶಿವಣ್ಣ ನಾಯಕ ,ಅಪ್ಪಾಜಿಗೌಡ , ಅಜಿತ್ ಸಿಂಗ್,ಸಿದ್ದು ಮುರಾರಿ, ಮಂಜುನಾಥ , ಶರಣು ಅಂಚಿನಾಳ , ಮಹಾಂತೇಶ ಜಾಲವಾಡಗಿ, ಈರಣ್ಣ ನಾಯಕ, ಶ್ರೀಮಂತ ಪಾಟೀಲ್ ಜಾಲವಾಡಗಿ, ಇತರೆ ಯುವ ಮುಖಂಡರು ಹಾಜರಿದ್ದರು.