ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ:ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೈದುಲ್ಲಾ ಅದಾವತ್

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ:
ಬಳ್ಳಾರಿ ಜಿಲ್ಲೆ:

ಕೊಟ್ಟೂರು :ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೈದುಲ್ಲಾ ಅದಾವತ್ ಕರೆ ನೀಡಿದರು. ಪಟ್ಟಣದ ಬಹು ದಿನಗಳ ನಾಗರಿಕರ ಕನಸಾಗಿದ್ದ ಉಪ ಪೊಲೀಸ್ ಠಾಣೆ ಮತ್ತು ವೃತ್ತ ನಿರೀಕ್ಷಕರ ಕಚೇರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಕಟ್ಟಡ ಕಾಮಗಾರಿಗೆ
ಸುಮಾರು 1.77ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆಯಾಗಿದ್ದು
ಕಾಮಗಾರಿಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಲು ಕರಾರು ಅಂತಿಮ್ಮ ಗೊಂಡಿದೆ ಎಂದು ತಿಳಿಸಿದರು.
ಇದೇ ವೇಳೆ ಅವರು ವಿವಿಧ ಸಂಘಟನೆಗಳು ಕೈಗೊಂಡ ಹೋರಾಟವನ್ನು ಸ್ಮರಿಸಿದರು .ವೇದಿಕೆಯಲ್ಲಿ ಸಾರ್ವಜನಿಕರ ಅಹವಾಲು ಮತ್ತು ಕುಂದು ಕೊರತೆಗಳ ಬಗ್ಗೆ ನಡೆದ ಸಭೆಯಲ್ಲಿ ರಾಜ್ಯ ಬೀಜ ನಿಗಮ ನಿರ್ದೇಶಕ ರಾಜೇಂದ್ರ ಪ್ರಸಾದ್ ,ಜೆಡಿಎಸ್ ಮುಖಂಡ ತಿಪ್ಪೇಸ್ವಾಮಿ ವೆಂಕಟೇಶ್ ಮುಂತಾದವರು ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು .ಕಾರ್ಯಕ್ರಮದಲ್ಲಿ ಆರಕ್ಷಕ ಇಲಾಖೆಯ ಅಧಿಕಾರಿಗಳಾದ ಮಲ್ಲೇಶ್ ನಾಯ್ಕ್ ,ಹರೀಶ್ ಹಾಗು ಕೊಟ್ಟೂರು ಸರ್ಕಲ್ ಇನ್ಸ್ ಪೆಕ್ಟ್ ರ್ ದೊಡ್ಡಪ್ಪ ,ಮತ್ತು ಸಬ್ ಇನ್ ಸ್ಪೆಕ್ಟ್ ರ್ ನಾಗಪ್ಪ ಉಪಸ್ಥಿತರಿದ್ದರು .ಪಟ್ಟಣದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬಾಗವಹಿಸಿದ್ದರು .

Share and Enjoy !

Shares