ಕುಡುತಿನಿ ಪಟ್ಟಣ ಪಂಚಾಯತ್ ಅಧ್ಯಕ್ಷ ,ಉಪಾಧ್ಯಕ್ಷ ಕಾಂಗ್ರೆಸ್ ತೆಕ್ಕೆಗೆ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ
ಕುಡುತಿನಿ: ರಾಜ್ಯದ ಪಪಂ ಮತ್ತು ಪುರಸಭೆ, ನಗರಸಭೆ ಅಧ್ಯಕ್ಷ ಹಾಗೂ6 ಉಪಾಧ್ಯಕ್ಷ ಸ್ಥಾನ ಚುನಾವಣೆಗೆ ಸಮಯ ನಿಗದಿಗೊಂಡ ಹಿನ್ನಲೆ ಸಮೀಪದ ಕುಡತಿನಿ ಪಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮಂಗಳವಾರ ನಡೆಯಿತು.ಚುನಾವಣೆ ಬೆಳಿಗ್ಗೆ 10 ಗಂಟೆಯಿಂದ ನಾಮ ಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂ7ದ ಬಿ. ರಾಜಶೇಖರ್ ಹಾಗೂ ಬನಹಟ್ಟಿ ದೊಡ್ಡಬಸಪ್ಪ ನಾಮ ಪತ್ರ ಸಲ್ಲಿಸಿದರೆ ಬಿಜೆಪಿ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ನಾಗರಾಜ್ ಹಾಗೂ ಆರ್. ಸಾಲಮ್ಮ ನಾಮ ಪತ್ರ ಸಲ್ಲಿಸಿದ್ದಾರೆ. ಮದ್ಯಾಹ್ನ 12.30 ಗಂಟೆಯಿಂದ ನಾಮ ಪತ್ರ ಹಿಂಪಡೆಯುವಿಕೆ ಆರಂಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಬನ್ನಿಹಟ್ಟಿ ದೊಡ್ಡಬಸಪ್ಪ ನಾಮ ಪತ್ರ ಹಿಂಪಡೆದ ಹಿನ್ನಲೆ ಅಧ್ಯಕ್ಷ ಸ್ಥಾನಕ್ಕೆ ಬಿ. ರಾಜಶೇಖರ್ ಒಬ್ಬರೇ ನಾಮ ಪತ್ರ ಬಂದಿದ್ದರಿಂದ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಆರ್ ಸಾಲಮ್ಮ ನಾಮ ಪತ್ರ ಹಿಂಪಡೆದ ಹಿನ್ನಲೆ ಗೀತಾ ನಾಗರಾಜ್ ಒಬ್ಬರೇ ನಾಮ ಪತ್ರ ಬಂದಿದ್ದರಿಂದ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಯು. ನಾಗರಾಜ್ ಘೋಷಣೆ ಮಾಡಿದರು.ನಾಮ ಪತ್ರ ಸಲ್ಲಿಕೆಯ ಪ್ರಾರಂಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷದ ಸದಸ್ಯರುಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದು, ಕಾಂಗ್ರೆಸ್ ಪಕ್ಷದಿಂದ ಸಂಡೂರ್ ಶಾಸಕ ಈ. ತುಕಾರಾಂ, ಮತ್ತು ಕೆ. ಎಸ್. ಎಲ್. ಸ್ವಾಮಿ ಸದಸ್ಯರುಗಳಿಗೆ ಸಮಾಧಾನ ಪಡಿಸಿದರೆ ಬಿಜೆಪಿ ಪಕ್ಷದಿಂದ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಮತ್ತು ಸಂಡೂರ್ ಬಿಜೆಪಿ ಮಂಡಲದ ಅಧ್ಯಕ್ಷ ಜಿ. ಟಿ. ಪಂಪಾಪತಿ ಗೌಡ, ಮುಖಂಡ ರಾಘವೇಂದ್ರ ಬಿಜೆಪಿ ಸದಸ್ಯರುಗಳಿಗೆ ಸಮಾಧಾನ ಪಡಿಸುವ ಪ್ರಸಂಗ ಕಂಡು ಬಂದಿತು.ಚುನಾವಣಾ ಪ್ರಕ್ರಿಯೆ ಹೊರ ಹೊಮ್ಮಿದ ನಂತರ ಜನಪ್ರತಿನಿದಿಗಳು ಹಾಗೂ ಮುಖಂಡರು ಮತ್ತು ಕಾರ್ಯಕರ್ತರು ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಹೂ ಮಾಲೆ ಹಾಕಿ ಅಭಿನಂದಿಸಿದರು.

Share and Enjoy !

Shares