ಮದುವೆಗೆಂದು ಬಂದು ನೀರುಪಾಲಾದ ಇಬ್ಬರು ಯುವಕರು

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಮಸ್ಕಿ: ತಾಲ್ಲೂಕಿನ ಶಂಕರ್ ನಗರ ಕ್ಯಾಂಪ್ ನ 62 ನೆಯ ಉಪ ಕಾಲುವೆಯಲ್ಲಿ ಇಂದು ಬೆಳಿಗ್ಗೆ ಈಜಲು ಹೋದ ಇಬ್ಬರು ಯುವಕರು ಕಾಲು ಜಾರಿ ಕಾಲುವೆಯಲ್ಲಿ ಬಿದ್ದ ಓರ್ವ ಯುವಕನ ರಕ್ಷಣೆಗೆ ಧಾವಿಸಿದ ಮತ್ತೊಬ್ಬ ಯುವಕ ನೂ ಕೂಡ ನೀರುಪಾಲಾದ ದುರ್ಘಟನೆ ಇಂದು ಬೆಳ್ಳಗ್ಗೆ 11.30ರ ಸುಮಾರಿಗೆ ಸಂಭವಿಸಿದೆ.
ಮದುವೆಗೆಂದು ದೂರದ ಹೈದ್ರಾಬಾದ್ ನಿಂದಾ ದೀಪಾಲಂಕಾರ ಮಾಡಲು ಆಗಮಿಸಿದ್ದ ಸುಮಾರು 20 ವರ್ಷದ ಇಬ್ಬರು ಯುವಕರು ನೀರಿನ ಆಳ ತಿಳಿಯದೆ ಕಾಲುವೆಗೆ ಬಿದ್ದಿದ್ದು ಯುವಕರ ಪತ್ತೆ ಕಾರ್ಯ ಕವಿತಾಳ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ನಡೆಯುತ್ತಿದೆ.

Share and Enjoy !

Shares