ಲಿಂಗಸೂಗೂರು ಪುರಸಭೆ ಜೆ ಡಿ ಎಸ್ ತೆಕ್ಕೆಗೆ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸೂಗೂರು: ಪುರಸಭೆ ಅಧ್ಯಕ್ಷರಾಗಿ ಗದ್ದೆಮ್ಮ ಗಂ.ಯಮನೂರಪ್ಪ ಭೋವಿ ಜೆ ಡಿ ಎಸ್ ಪಕ್ಷದಿಂದ ಹಾಗೂ ಉಪಾಧ್ಯಕ್ಷರಾಗಿ m D ರಪ್ಪಿ ಅವಿರೋಧವಾಗಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ.
ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ ಲಿಂಗಸೂಗೂರು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಗೊಂದಲಕ್ಕೆ ಕೆಲದಿನಗಳ ಹಿಂದೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿತ್ತು ನವಂಬರ್ 2ರ ಒಳಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಮಾಡಲು ಹೈಕೋರ್ಟ್ ಆದೇಶದಂತೆ ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಆಯ್ಕೆ ಮಾಡಲಾಯಿತು.ಇಂದು ಪುರಸಭೆ ಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗದ್ದೆಮ್ಮ ಮತ್ತು j D s ಪಕ್ಷ ದಿಂದ್ದ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು ಅವಿರೋಧ ಆಯ್ಕೆ ಉಪಾಧ್ಯಕ್ಷ ಸ್ಥಾನಕ್ಕೆ m D ರಪ್ಪಿ ಕಾಂಗ್ರೆಸ್ ಪಕ್ಷದಿಂದ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು ನಂತರ ಲಿಂಗಸುಗೂರು ತಹಸೀಲ್ದಾರ್ ಚಾಮರಾಜ ಪಾಟೀಲ್ ಅಧಿಕೃತವಾಗಿ ಘೋಷಣೆ ಮಾಡಿದರು.
ಕಾಂಗ್ರೆಸ್ ಸಂಭ್ರಮಾಚರಣೆ: ಲಿಂಗಸೂಗೂರು ಪುರಸಭೆ ಅಧ್ಯಕ್ಷ-ಜೆ ಡಿ ಎಸ್ ಉಪಾಧ್ಯಕ್ಷ ಕಾಂಗ್ರೆಸ್ ಸ್ಥಾನಗಳು ಘೋಷಣೆಯಾಗುತ್ತಿದ್ದಂತೆಯೇ ಪುರಸಭೆ ಮುಂಭಾಗದಲ್ಲಿ ಸೇರಿದ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರವಾಗಿ ಬಣ್ಣವನ್ನು ಹಚ್ಚಿಕೊಂಡು ಸಂಭ್ರಮಾಚರಣೆ ಮಾಡಿದರು ಸಂಭ್ರಮಾಚರಣೆ ಮಾಡಲಾಯಿತು

Share and Enjoy !

Shares