ಬಂಜಾರ ಧರ್ಮ ಗುರು ನಿಧನಕ್ಕೆ ಸಂತಾಪ ಸೂಚಿಸಿದ ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ

Share and Enjoy !

Shares
Listen to this article

 

ವಿಜಯನಗರವಾಣಿ
ರಾಯಚೂರು ಜಿಲ್ಲೆ
ಮಸ್ಕಿ:ಬಾಲ ತಪಸ್ವಿ ಬಂಜಾರ ಧರ್ಮ ಗುರು ರಾಮರಾವ ಮಹಾರಾಜರು ದೈವದೀನರಾದ ಹಿನ್ನಲೆಯಲ್ಲಿ ಇಲ್ಲಿನ ಬಂಜಾರ ಸಮಾಜದ ಮುಖಂಡರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಹಾರಾಜರ ಭಾವಚಿತ್ರಕ್ಕೆ ಹೂವಿನಹಾರ ಅರ್ಪಿಸಿ ಸಂತಾಪ ಸೂಚಿಸಿದರು. ಈ ವೇಳೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರು ಮಾತನಾಡಿ, ಜಗದ್ಗುರು ಸಂತ, ಬಾಲ ತಪಸ್ವಿ ರಾಮರಾವ ಮಹಾರಾಜರು ಅನೇಕ ಪಡಾಡಗಳನ್ನು ಕೈಗೊಂಡು ಮನುಕುಲಕ್ಕೆ ಒಳಿತು ಮಾಡಿದ್ದಾರೆ. ಅವರ ನಿಧನದಿಂದ ಈ ದೇಶದ ಜನತೆಗೆ ದುಃಖ ಉಂಟಾಗಿದೆ. ಗುರುಗಳು ನಿಧನರಾಗಿ ನಮ್ಮ ಆತ್ಮಕ್ಕೆ ಲಿಂಗೈಕ್ಯರಾಗಿದ್ದಾರೆ. ಇಂದಿನ ಸಮಾಜದ ಯುವಕರು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು. ಬಳಿಕ ಮುದಗಲ್ಲ ಕ್ರಾಸ್‌ ಹತ್ತಿರದ ಸಂತ ಸೇವಾಲಾಲ ವೃತ್ತಕ್ಕೆ ಬಂಜಾರ ಸಮಾಜದ ಮುಖಂಡರು ಹೂವಿನಹಾರ ಅರ್ಪಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಐಬಿಎಸ್ಎಸ್ ರಾಜ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ, ಎಐಬಿಎಸ್ ಎಸ್ ತಾಲೂಕ ಅಧ್ಯಕ್ಷ ಅಮರೇಶ ಅಂತರಗಂಗಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ ಶ್ರೀನಿವಾಸ ಚವ್ಹಾಣ, ಅಮರೇಶ ಪವಾರ, ಕೃಷ್ಣಮೂರ್ತಿ, ಆನಂದ ವಕೀಲರು, ಮೀಠಪ್ಪ ರಾಠೋಡ್, ವಿಠಲ ಕೆಳೂತ್, ಶೇಖರ, ಈಶಪ್ಪ,ರವಿ ರಾಠೋಡ್, ದುರಗೇಶ ಸುಲ್ತಾನಪುರ, ಡಾಕಪ್ಪ, ಚಂದ್ರು ಕಲಕಬೆಂಚಿ, ಶಿವಪ್ಪ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.

Share and Enjoy !

Shares