ಮಸ್ಕಿ ತಾಲೂಕಿನಾದ್ಯಂತ ಸರಳ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ.

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

ಮಸ್ಕಿ :ತಾಲೂಕಿನಾದ್ಯಂತ ವಿವಿಧ ಹೋಬಳಿಗಳಲ್ಲಿ ಅತ್ಯಂತ ಸರಳ ರೀತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು. ಕೋವಿಡ್ ಸಂಕಷ್ಟದ ನಡುವೆಯೇ ತಾಲ್ಲೂಕಿನ ವಿವಿಧ ಪಂಚಾಯ್ತಿಗಳಲ್ಲಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ದೇಶದ ಮಹಾನ್ ಕವಿಗಳಲ್ಲಿ ಮೊದಲಿಗಾರೆನಿಸುವ ಆದಿ ಕವಿ ವಾಲ್ಮೀಕಿ ಜಯಂತಿ ಸರಳವಾಗಿ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಆಚರಿಸಲಾಯಿತು.ನನ್ನ ಸಂದರ್ಭದ ಲ್ಲಿ ಮಾತನಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರ ತೊರಣದಿನ್ನಿ ವೈದ್ಯರಾದ ಡಾಕ್ಟರ್. ಸಿಂಗ್ ವಾಲ್ಮೀಕಿ ಒಬ್ಬ ಶ್ರೇಷ್ಠ ಕವಿ ಅವರ ರಾಮಾಯಣ ಗ್ರಂಥ ಸಾರ್ವಕಾಲಿಕ ಶ್ರೇಷ್ಠ ಗ್ರಂಥ ಎಂಬುದರಲ್ಲಿ ಸಂಶಯವಿಲ್ಲ. ಅವರ ತಾಳ್ಮೆ ಪರಿಶ್ರಮ ಶ್ರೇಷ್ಠ ವಾದುದು ಅವರನ್ನು ಆದರ್ಶವಾಗಿ ಇಟ್ಟುಕೊಂಡು ಇಂದಿನ ಯುವ ಪೀಳಿಗೆ ಮುಂದಾಗಬೇಕು ಎಂದು ತಿಳಿಸಿದರು.ಇದೇ ರೀತಿ ಯಾಗಿ ಅಮೀನಗಡ ಗ್ರಾಮ ಪಂಚಾಯತಿ, ಗ್ರಾಮ ಪಂಚಾಯ್ತಿ ಹಿರೆದಿನ್ನಿ. ಹಾಗೂ ಇನ್ನಿತರೆ ಸರಕಾರಿ ಕಚೇರಿಯಲ್ಲಿ ಸರಳ ರೀತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು .

Share and Enjoy !

Shares