ರಾಜಕೀಯ ಶಕ್ತಿ ಕೇಂದ್ರ ಅರಕೇರಾ: (RYFI) ಹೋಬಳಿ ಘಟಕ ರಚನೆ

Share and Enjoy !

Shares

ವಿಜಯನಗರವಾಣಿ

ರಾಯಚೂರು ಜಿಲ್ಲೆ

ದೇವದುರ್ಗ :ತಾಲೂಕಿನ ಅರಕೇರಾ ಪ್ರಸ್ತಾವಿತ ತಾಲೂಕ ಹೋಬಳಿಯಲ್ಲಿ ಭಾರತ ಕ್ರಾಂತಿಕಾರಿ ಯುವ ಸಂಘಟನೆಯನ್ನು ರಚನೆ
ಇಂದು ಅರಕೇರಾದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜರುಗಿದ ಸಭೆಯಲ್ಲಿ ಸಚ್ಚಿದಾನಂದ ಹೆಗ್ಗಡದಿನ್ನಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು
ಮುಖ್ಯ ಅತಿಥಿ ಸ್ಥಾನ ವಹಿಸಿದ ಕಲ್ಯಾಣ ಕರ್ನಾಟಕ ಉಸ್ತುವಾರಿ ಗಳಾದ ಡಾ. ಶರಣಬಸವ ಹಿರೇರಾಯಕುಂಪಿ ಅವರು ದೇಶದ ಪರಸ್ಥಿತಿ ಆರ್ಥಿಕ ಸಂಕಷ್ಟದಿಂದ ಕೂಡಿದೆ, ದಿನದಿಂದ ದಿನಕ್ಕೆ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಹಾಗೂ ಅಪೌಷ್ಟಿಕತೆ ಜಾಸ್ತಿ ಆಗುತ್ತಿದೆ ನಮ್ಮನ್ನಾಳುವ ಸರಕಾರಗಳು ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ನಂತರ 20%ದಷ್ಟು ಉದ್ಯೋಗ ಸೃಷ್ಟಿಸಿಲ್ಲ ನ್ಯಾಯ ಕೇಳುವವರನ್ನು ನಕ್ಸಲ್ವಾದಿ, ಭಯೋತ್ಪಾದಕರ ಪಟ್ಟ ಕಟ್ಟಲಾಗುತ್ತಿದೆ, ಇನ್ನೊಂದಡೆ ಸಂವಿಧಾನ ಬದಲಾವಣೆ ಮಾಡಬೇಕು ಅನ್ನುವ ಮಾತುಗಳು ಕೇಳಿ ಬರುತ್ತಿದೆ ಹೀಗಾಗಿ ಸಂವಿಧಾನ ಈ ದೇಶದ ದಲಿತರ ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಹೃದಯವಿದ್ದಂತೆ ಈ ಕಾರಣಕ್ಕಾಗಿ ಯುವಕರು ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕು ಮತ್ತು ಅದರ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ RYFI ನ ತಾಲೂಕ ಅಧ್ಯಕ್ಷರಾದ ಬಿ.ನಾಗರಾಜ ಶಾವಂತಂಗೇರಾ ಅವರು ನಮ್ಮ ಜಿಲ್ಲೆ ಮತ್ತು ತಾಲೂಕಿನಲ್ಲಿ ಎಲ್ಲ ನಿಸರ್ಗದ ಸಂಪತ್ತು ಇದೆ ಅಲ್ಲದೆ ರಾಜ್ಯದಲ್ಲಿಯೇ ಅತೀ ಹೆಚ್ಚು ಹತ್ತಿ ಬೆಳಿಯಲಾಗುತ್ತಿದೆ ಆದರೆ ಒಂದೇ ಒಂದು ಗಾರ್ಮೆಂಟ್ಸ್ ಇಲ್ಲ ಹೀಗಾಗಿ ಜಿಲ್ಲೆಯ ಮತ್ತು ತಾಲೂಕಿನ ಯುವಕರಿಗೆ ಉದ್ಯೋಗ ಇಲ್ಲದಂತೆ ಆಗಿದೆ ಮತ್ತು ಇಲ್ಲಿನ ಯುವಕರು ಹೊರ ರಾಜ್ಯಗಳಿಗೆ ಗೂಳೇ ಹೋಗುವಂತ ಪರಸ್ಥಿತಿ ನಿರ್ಮಾಣವಾಗಿದೆ. ದೇವದುರ್ಗ ತಾಲೂಕಿನಲ್ಲಿ ಕೈಗಾರಿಕೆಗಳು ಬರಬೇಕು ಇಲ್ಲಿನ ಯುವಕರಿಗೆ ಉದ್ಯೋಗ ದೊರಿಯುವಂತೆ ಆಗಬೇಕು ನಮ್ಮ ಬಾಗದ ಜನ ಪ್ರತಿನಿಧಿಗಳು ಗಮನ ಹರಿಸಬೇಕು ಎಂದು ಮಾತನಾಡಿದರು. ಸಭೆಯಲ್ಲಿ RYFI ತಾಲೂಕ ಉಪಾಧ್ಯಕ್ಷರಾದ ಪ್ರಭು ಹೇಮನಾಳ ಮಲ್ಲಿಕಾರ್ಜುನ ಜಿನ್ನಾಪುರ ಬಸವರಾಜ ಚಟ್ಟಿ ರಂಗಪ್ಪ ನಾಯಕ ಮುಂತಾದವರು ಉಪಸ್ಥಿತರಿದ್ದರು ಮತ್ತು ಅರಕೇರಾ ಹೋಬಳಿಯ ಅಧ್ಯಕ್ಷರಾಗಿ ಭೀಮರಾಯ ಕೊಂಕಲ್
ಉಪಾಧ್ಯಕ್ಷರಾಗಿ ದೇವರಾಜ ನಾಯಕ ಬೂಮನಗುಂಡ
ಉಪಾಧ್ಯಕ್ಷರಾಗಿ ಸಚ್ಚಿದಾನಂದ ಹೆಗ್ಗಡದಿನ್ನಿ
ಪ್ರಧಾನ ಕಾರ್ಯದರ್ಶಿ ಹನುಮೇಶ ನಾಯಕ
ಕಾರ್ಯದರ್ಶಿ ಬಸವರಾಜಗೌಡ ಹೇಮನೂರ್
ಸಹ ಕಾರ್ಯದರ್ಶಿ ಅಂಜಿನಯ್ಯ ಜೆಲ್ಲೇರ್ ಅರಕೇರಾ
ಖಜಾಂಚಿ ಅಂಜಿನಯ್ಯ ಮಲ್ಲೇದೇವರಗುಡ್ಡ ಸೇರಿ 5 ಜನ ಕಾರ್ಯಕಾರಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಎಲ್ಲ ಊರಿನ ಯುವಕರು ಬಾಗವಹಿಸಿದ್ದರು.

Share and Enjoy !

Shares