60 ಕಿಂಟ್ವಾಲ್ ಪಡಿತರ ಅಕ್ಕಿವಶ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ

ಕುರುಗೋಡು:ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ಶುಕ್ರವಾರ 6ನೇ ವಾರ್ಡಿನ ಹಿಟ್ಟಿನ ಗಿರಾಣಿಯಲ್ಲಿ ಆಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಮತ್ತು ಕುರುಗೋಡು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಎಸ್.ಪಿ. ಅವರ ಮಾರ್ಗದರ್ಶನದಲ್ಲಿ ಗ್ರಾಮದ ಧನುಂಜಯ ಎಂಬುವವರ ಹಿಟ್ಟಿನ ಗಿರಣಿಯಲ್ಲಿ ಸಣ್ಣ ರಾಜಪ್ಪ ಎಂಬುವ ವ್ಯಕ್ತಿ ಆಕ್ರಮವಾಗಿ ಸಂಗ್ರಹಿಸಿದ್ದ 1.ಲಕ್ಷದ 56 ಸಾವಿರ ಮೌಲ್ಯದ 60ಕಿಂಟ್ವಾಲ್ (120) ಚೀಲಗಳನ್ನು ಬಳ್ಳಾರಿ ಆಹಾರ ಇಲಾಖೆಯ ಆಧಿಕಾರಿ ಶಿರಸ್ತಧಾರರು ರವಿ ರಾಥೋಡ್, ಆಹಾರ ನಿರೀಕ್ಷಕರು ಶರಣಪ್ಪ, ಎಮ್ಮಿಗನೂರಿನ ಸಹಕಾರ ಸಂಘದ ಕಾರ್ಯನಿರ್ವಾಹಕ ವೈ.ಜಡೇಶರೆಡ್ಡಿ. ಹಾಗೂ ಕುರುಗೋಡು ಸಿಪಿಎ ಚಂದನಗೋಪಾಲ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ವಶಪಡಿಸಿಕೊಂಡ
ಕುರುಗೋಡು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share and Enjoy !

Shares