ವಿಜಯನಗರವಾಣಿ ಸುದ್ದಿ
ಮಸ್ಕಿ. ಕೋವಿಡ್ 19 ಸಂದರ್ಭದಲ್ಲಿ ಅಂಧ ಅಂಗವಿಕಲ, ಪಾರ್ಶ್ವವಾಯು, ಮಾನಸಿಕ ಅಸ್ವಸ್ಥರನ್ನು ಹುಡುಕಿ ಅವರಿಗೆ ವೈದ್ಯಕೀಯ ಸೌಲಭ್ಯ , ಆಹಾರ ಹಾಗೂ ವಿಶೇಷವಾಗಿ ಸಾಮಾಜಿಕ ಸೇವೆಯಲ್ಲಿ ನಿರತವಾಗಿದ್ದಕ್ಕಾಗಿ
ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಾಮಣ್ಣ ಹಂಪರಗುಂದಿ ಯವರಿಗೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.
ಇಂದು ರಾಯಚೂರಿನ ಡಿ. ಎ ಆರ್.ಮೈದಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾಮಾಜಿಕ ಕಳಕಳಿ ಹೊಂದಿರುವ ಸಾಮಾಜ ಸೇವಕರನ್ನು ಗುರುತಿಸಿ ನೀಡಲಾಗುವ ಪ್ರಶಸ್ತಿಯನ್ನು ಮಸ್ಕಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಮಣ್ಣ ಹಂಪರಗುಂದಿ ಒಲಿದು ಬಂದಿತ್ತು.
ಈ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ,ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ್ ಹಾಗೂ ಜಿಲ್ಲಾಧಿಕಾರಿಗಳು, ಪೋಲೀಸ್ ವರಿಷ್ಠಾಧಿಕಾರಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು