ಕನ್ನಡ ಭಾಷೆಯ ಹಿರಿಮೆ, ಮಹತ್ವವನ್ನು ಸಾರೋಣ : ಭರಮಜ್ಜ ನಾಯಕ

Share and Enjoy !

Shares

 

ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ

ಹಗರಿಬೊಮ್ಮನಹಳ್ಳಿ : ಕನ್ನಡ ಭಾಷೆಯ ಹಿರಿಮೆ ಹಾಗೂ ಮಹತ್ವವನ್ನು ಮಕ್ಕಳಿಗೆ ಮತ್ತು ಇಂದಿನ ಯುವ ಪೀಳಿಗೆಗೆ ತಿಳಿಸುವ ಮೂಲಕ ಕನ್ನಡದ ಉಳಿವಿಗಾಗಿ ಶ್ರಮಿಸೋಣ ಎಂದು ಕರವೇ (ಪ್ರವೀಣ್ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಭರಮಜ್ಜ ನಾಯಕ ಹೇಳಿದರು
ಪಟ್ಟಣದ ತೇರುಬೀದಿಯಲ್ಲಿ ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಸುಮಾರು ಎರಡೂವರೆ ಸಹಸ್ರಮಾನದ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ಕನ್ನಡ. ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆಯು ಸಹ ಪ್ರಮುಖವಾಗಿದೆ. ಕೇವಲ ನವೆಂಬರ್ ಮಾಸಕ್ಕೆ ಮಾತ್ರ ಕನ್ನಡವನ್ನು ಸೀಮಿತವಾಗಿಡದೆ ದಿನ ನಿತ್ಯ ಕನ್ನಡ ಭಾಷೆಯನ್ನು ಬಳಸಿ ಬೆಳಸಬೇಕು. ಇಂದಿನ ಪೋಷಕರು ಆಂಗ್ಲ ಮಾಧ್ಯಮ ಶಾಲೆಗಳ ಕಡೆ ತಲೆಮಾಡದೆ, ನಾಡಿನ ಭಾಷೆ ಹಾಗೂ ಸಂಸ್ಕøತಿಯ ಬಗ್ಗೆ ಮಕ್ಕಳಿಗೆ ತಿಳಿಸಿ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ ಎಂದರು.ಕನ್ನಡ ಯುವಶಕ್ತಿ ವೇದಿಕೆಯ ಅಧ್ಯಕ್ಷ ಸಂಚಿ ಶಿವಕುಮಾರ್ ಮಾತನಾಡಿ, ಕನ್ನಡ ನಾಡು ನುಡಿ, ಭಾಷೆ ರಕ್ಷಣೆಗೆ ಯುವ ಸಮೂಹ ಸಂಘಟಿತರಾಗಬೇಕಿದೆ. ನೆರೆಹೊರೆ ರಾಜ್ಯದವರು ಕರ್ನಾಟಕದಲ್ಲಿ ನೆಲೆಸಿದರೂ ಭಾಷೆ ಕಲಿಯಲು ಉದಾಸೀನತೆ ಬೇಡ. ಕನ್ನಡಿಗರು ಪರ ಭಾಷಿಕರಿಗೆ ಭಾಷೆ ಕಲಿಸುವ ಮೂಲಕ ಕನ್ನಡ ಭಾಷೆಯ ಹಿರಿಮೆಯನ್ನು ಹೆಚ್ಚಿಸಬೇಕಿದೆ ಎಂದರು.ಈ ಸಂದರ್ಭದಲ್ಲಿ ನಾಣ್ಯಾಪುರ ಕೃಷ್ಣಮೂರ್ತಿ, ಬಸಾಪುರ ರಾಘವೇಂದ್ರ, ಸುಭಾಷ್, ವೆಂಕಟೇಶ್, ಆತೀಫ್, ಅರಸಿಕೇರಿ ಹನುಮಂತ, ಗುಂಡ್ರು ಹನುಮಂತ, ವಡ್ಡರ ಸೋಮಣ್ಣ, ಮಡಿವಾಳರ ಸೋಮನಾಥ, ಗಾಂಜಿ ಅಜ್ಜಯ್ಯ, ಮಂಜುನಾಥ, ಕೆ.ಎಂ.ಶಿವಶಂಕರಯ್ಯ, ಕರವೇ ಕಾರ್ಯಕರ್ತರು ಇದ್ದರು.

Share and Enjoy !

Shares