ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ .
ಮಾನ್ವಿ:- ಪಟ್ಟಣದ ಐಬಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ನ ಕಿಟಕಿ, ಮತ್ತು ಬಾಗಿಲನ್ನು ಮುರಿದ ಖದೀಮರು ಕಳ್ಳತನಕ್ಕೆ ಯತ್ನಿಸಿದ ಘಟನೆ ಮಂಗಳವಾರ ಬೆಳಗಿನ ಜಾವ 4:30 ರ ವೇಳೆಗೆ ಜರುಗಿದೆ.
ಕಳ್ಳರು ಮಂಗಳವಾರ ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಕೆನರಾ ಬ್ಯಾಂಕ್ ನ ಕಿಟಕಿ ಮತ್ತು ಬಾಗಿಲನ್ನು ಕಬ್ಬಿಣದ ಆರೆಯಿಂದ ಮುರಿದು ಕಳ್ಳತನಕ್ಕೆ ಯತ್ನಿಸುವ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ವ್ಯಕ್ತಿಯೊಬ್ಬರು ಆಗಮಿಸಿ ಯಾರು ನೀವು ಏನು ಮಾಡುತ್ತೀರುವಿರಿ ಎಂದು ಪ್ರಶ್ನಿಸಿದಾಗ ನಾವು ಬ್ಯಾಂಕ್ ನ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದೇವೆ. ಎಂದು ರಾಜಾರೋಷವಾಗಿ ಆ ವ್ಯಕ್ತಿಗೆ ಮರು ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಆಗ ಆ ವ್ಯಕ್ತಿ ತನ್ನಲ್ಲಿರುವ
ವಿಡಿಯೋ ಮಾಡಲು ಮುಂದದಾಗ ಕಳ್ಳರು ಬ್ಯಾಂಕ್ ಬಾಗಿಲನ್ನು ಹೊಡೆಯುವುದನ್ನು ಅರ್ಧಕ್ಕೆ ನಿಲ್ಲಿಸಿ ಆ ವ್ಯಕ್ತಿಯ ಹತ್ತಿರ ದೌಡಾಯಿಸಿ ಏನೋ ವಿಡಿಯೋ ಫೋಟೋ ಶೂಟ್ ಮಾಡ್ತೀಯ ನಿನ್ನ ಮೊಬೈಲ್ ಫೋನ್ ಕೊಡು ಕೊಟ್ಟಿಲ್ಲ ಅಂದ್ರೆ ಆರೆಯಿಂದ ಚುಚ್ಚಿಬಿಡುತೀವಿ ನೋಡು ಎಂದು ಆ ವ್ಯಕ್ತಿಯ ಮೊಬೈಲ್ ಫೋನ್ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.