ಲಾರಿಕದ್ದು ಪರಾರಿಯಾಗಿದ್ದ ಆರೋಪಿಗಳ ಬಂದನ

Share and Enjoy !

Shares

 

ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ

ದಿನಾಂಕ: 10/10/2020 ರಂದು ಬೆಳಗಿನ ಜಾವ 1:00 ಗಂಟೆ ಸುಮಾರಿಗೆ ಬೀದರ್ – ಶ್ರೀರಂಗಪಟ್ಟಣದ ರಾಷ್ಟ್ರೀಯ ಹೆದ್ದಾರಿ ನಂ.150(ಎ) ಮೇಲೆ ತೆಕ್ಕಲಕೋಟೆ ಠಾಣಾ ವ್ಯಾಪ್ತಿಯಲ್ಲಿ ಯಾರೋ ಲಾರಿ ಚಾಲಕರಿಗೆ ಮಾರಕ ಆಯುಧಗಳಿಂದ ಹಲ್ಲೆ ಮಾಡಿ ಬಾಯಿ, ಕೈ ಹಾಗೂ ಕಾಲುಗಳನ್ನು ಕಟ್ಟಿ ಒಂದು ಕಡೆ ಎಸೆದು ಹಣವನ್ನು ಹಾಗೂ ಇತರೆ ದಾಖಲಾತಿಗಳನ್ನು ಮತ್ತು ಲಾರಿಯನ್ನು ಕಸಿದುಕೊಂಡು ಹೋಗಿದ್ದು ಈ ಬಗ್ಗೆ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಗುನ್ನೆ ನಂ:81/2020 ಕಲಂ: 395,397 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿರುತ್ತದೆ.
ಈ ಪ್ರಕರಣವನ್ನು ಭೇಧಿಸಲು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧೀಕಾರಿಗಳಾದ ಮಾನ್ಯ ಶ್ರೀ ಸೈದುಲಾ ಅದಾವತ್ ಐಪಿಎಸ್, ಮತ್ತು ಶ್ರೀಮತಿ ಲಾವಣ್ಯ ಬಿ.ಎನ್ ಅಡಿಷನಲ್ ಎಸ್.ಪಿ, ಶ್ರೀ ಅರುಣ್ ಕುಮಾರ್ ಕೋಳೂರ. ಡಿ.ವೈ.ಎಸ್.ಪಿ ಬಳ್ಳಾರಿ ಗ್ರಾಮೀಣ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಈ. ಕಾಳಿಕೃಷ್ಣ ಸಿ.ಪಿ.ಐ. ತೆಕ್ಕಲಕೋಟೆ ವೃತ್ತ ರವರು ಶ್ರೀ.ತಿಮ್ಮಣ್ಣ, ಪಿ.ಎಸ್.ಐ. ತೆಕ್ಕಲಕೋಟೆ ಪೊಲೀಸ್ ಠಾಣೆ, ಶ್ರೀ.ಅಮರೇಗೌಡ, ಪಿ.ಎಸ್.ಐ. ಸಿರಿಗೇರಿ ಪೊಲೀಸ್ ಠಾಣೆ, ಹಾಗೂ ಸಿಬ್ಬಂದಿಯವರಾದ ಜಿ. ಪ್ರವೀಣ ಕುಮಾರ್, ಶ್ರೀ.ಕಾಶೀಮಸ್ತಾ. ವಾಲೀಕಾರ, ಶ್ರೀ.ಚಿದಾನಂದ, ಶ್ರೀ.ಗಂಗಾಧರ, ರಾಮಲಿಂಗಪ್ಪ, ಶ್ರೀ.ಪಂಪಾಪತಿ, ಶ್ರೀ.ಸಂತೋಷ್ ಕುಮಾರ್, ಶ್ರೀ.ಎಂ.ವಿಶ್ವನಾಥ ರವರೊಂದಿಗೆ ತಂಡವನ್ನು ರಚಿಸಲಾಗಿತ್ತು. ಸದರಿ ತಂಡವು ಈ ಪ್ರಕರಣವನ್ನು ವೈಜ್ಞಾನಿಕ ರೀತಿಯಲ್ಲಿ ತನಿಖೆ ಮಾಡಿ ಪ್ರಕರಣದಲ್ಲಿ ಭಾಗಿಯಾಗಿರುವ ಅಂತರ್ ರಾಜ್ಯ ದರೋಡೆಕೋರರಾದ 1). ಸುಭಾಷ್ ಕಾಳೆ ತಂದೆ ಭೀಮರಾವ್ ಕಾಳೆ, ವಯಸ್ಸು 29 ವರ್ಷ, ಆದಿವಾಸಿ ಪಾರ್ದಿ ಜನಾಂಗ, ಡ್ರೈವರ್ ಕೆಲಸ, ವಾಸ: ಕನ್ನೇರ್‍ವಾಡಿ ಪಾರ್ಟಿ, ಅಂದೋರಾ ಗ್ರಾಮ, ಕಳಂಬ-ತಾಲೂಕು, ಉಸ್ಮನಾಬಾದ್-ಜಿಲ್ಲೆ, ಮಹಾರಾಷ್ಟ್ರ ರಾಜ್ಯ. 2). ನಾನಾ ಕಾಳೆ ತಂದೆ ಭಾಸ್ಕರ್‍ರಾವ್ ಕಾಳೆ, ವಯಸ್ಸು 40 ವರ್ಷ, ಆದಿವಾಸಿ ಪಾರ್ದಿ ಜನಾಂಗ, ಡ್ರೈವರ್ ಕೆಲಸ, ವಾಸ: ಕನ್ನೇರ್‍ವಾಡಿ ಪಾರ್ಟಿ, ಅಂದೋರಾ ಗ್ರಾಮ, ಕಳಂಬ-ತಾಲೂಕು, ಉಸ್ಮನಾಬಾದ್-ಜಿಲ್ಲೆ, ಮಹಾರಾಷ್ಟ್ರ ರಾಜ್ಯ., 3). ಸುಭಾಷ್ ಕಾಳೆ ತಂದೆ ಭಾಸ್ಕರ್ ಕಾಳೆ, ವಯಸ್ಸು 25 ವರ್ಷ, ಆದಿವಾಸಿ ಪಾರ್ದಿ ಜನಾಂಗ, ಡ್ರೈವರ್ ಕೆಲಸ, ವಾಸ: ಕನ್ನೇರ್‍ವಾಡಿ ಪಾರ್ಟಿ, ಅಂದೋರಾ ಗ್ರಾಮ, ಕಳಂಬ-ತಾಲೂಕು, ಉಸ್ಮನಾಬಾದ್-ಜಿಲ್ಲೆ, ಮಹಾರಾಷ್ಟ್ರ ರಾಜ್ಯ.ರವರನ್ನು ಬಂಧಿಸಿ ಪ್ರಕರಣದಲ್ಲಿ ಭಾಗಿಯಾಗಿದ್ದ 2 ಲಾರಿಗಳನ್ನು ಜಪ್ತು ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತದೆ. ಇನ್ನು 3 ಜನ ಆರೋಪಿತರು ಪರಾರಿಯಲ್ಲಿರುತ್ತಾರೆ. ತನಿಖೆಯಲ್ಲಿ ಸದರಿ ಆರೋಪಿತರು ಮೂಲತಃ ಮಹಾರಾಷ್ಟ್ರ ರಾಜ್ಯದ ಉಸ್ಮನಾಬಾದ್ ಜಿಲ್ಲೆಯವರಾಗಿದ್ದು, ಲಾರಿಗಳಲ್ಲಿ ಚಾಲಕರಾಗಿ ಮತ್ತು ಕ್ಲೀನರ್ ಗಳಾಗಿ ಬಂದು ಹೆದ್ದಾರಿಯ ಮೇಲೆ ಸುಲಿಗೆ, ದರೋಡೆ, ಟೈರ್‍ಗಳ ಕಳ್ಳತನ, ಡೀಜೆಲ್ ಕಳ್ಳತನ, ಮನೆ ಕಳ್ಳತನ ಹಾಗು ರಸ್ತೆಯುದ್ದಕ್ಕೂ ರಸ್ತೆಯ ಆಜು ಬಾಜುಗಳಲ್ಲಿರುವ ಅಂಗಡಿಗಳ ಕಳ್ಳತನ ಮಾಡುವ ಪ್ರವೃತ್ತಿಯುಳ್ಳವರಾಗಿರುತ್ತಾರೆಂದು ತಿಳಿದು ಬಂದಿರುತ್ತದೆ.

Share and Enjoy !

Shares