ನಿಯಂತ್ರಣ ತಪ್ಪಿ ಭೈಕ್ ಸವಾರ ಸ್ಥಳದಲ್ಲಿಯೇ ಸಾವು

Share and Enjoy !

Shares
Listen to this article

 

ವಿಜಯಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸೂಗೂರು ತಾಲ್ಲೂಕಿನ ಮುದಗಲ್ ಪಟ್ಟಣದಿಂದ ಆಶಿಹಾಳ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿನ ಗಂಗಾಧರ ಬಸವಣ್ಣ ದೇವಸ್ಥಾನದ ಬಳಿ ಮಂಗಳವಾರ ತಡರಾತ್ರಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕೆಕ್ಕೆ ಬಿದ್ದಿದ್ದದ್ದರ ಪರಿಣಾಮ
ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದ ಘಟನೆ
ಮುದಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನಡೆದಿದೆ.
ಮೃತ ಬೈಕ್ ಸವಾರ
ಲಿಂಗಸುಗೂರು ತಾಲೂಕಿನ ಗೊರೇಬಾಳ ತಾಂಡಾದ ಸುರೇಶ ( 35 ) ಆಶಿಹಾಳ ತಾಂಡಾಗೆ ತೆರಳುವಾಗ ಘಟನೆ ನಡೆದಿದ್ದು ಬುಧವಾರ ಬೆಳಗಿನ ಜಾವ ಸಾರ್ವಜನಿಕರು ಗಮನಿಸಿ ಮಾಹಿತಿ ನೀಡಿದ್ದು ಸ್ಥಳಕ್ಕೆ ಪಿಎಸ್‌ಐ ಡಾಕೇಶ ಯು ಭೇಟಿ ನೀಡಿ ಪರಿಶೀಲನೆ ನಡೆಸಿದಸಿದ್ದು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share and Enjoy !

Shares