ಎಸ್​ಬಿಐ ಬ್ಯಾಂಕ್​ನಲ್ಲಿ ದರೋಡೆಗೆ ಯತ್ನ: ಓರ್ವವ್ಯಕ್ತಿಯು ಬಂಧನ.

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ .

ಮಾನ್ವಿ: ತಾಲೂಕಿನ ಹಿರೇಕೊಟ್ನೆಕಲ್ ಎಸ್‌ಬಿಐ ಬ್ಯಾಂಕ್ ಬೀಗ ಮುರಿದು ದರೋಡೆಗೆ ಯತ್ನಿಸಿದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ತಡರಾತ್ರಿ ಬ್ಯಾಂಕ್​ ಹೊರಗಡೆಯ ಸಿಸಿ ಕ್ಯಾಮರಾ ಜಖಂಗೊಳಿಸಿ ಮುಖ್ಯ ಬಾಗಿಲು ಒಡೆದು ಬ್ಯಾಂಕ್ ಒಳಗೆ ಪ್ರವೇಶಿಸಿ ಕಳ್ಳರು ಹಣ ದೋಚುತ್ತಿದ್ದರು.
ಅದೇ ಸಮಯಕ್ಕೆ ರಾತ್ರಿ ಗಸ್ತು ಬಂದ ಪೊಲೀಸರು ಬ್ಯಾಂಕ್ ಬಾಗಿಲು ತೆರೆದಿದ್ದನ್ನು ಗಮನಿಸಿ ಬ್ಯಾಂಕ್​ ಒಳಗೆ ಹೋಗಿದ್ದಾರೆ. ಪೊಲೀಸರು ಬಂದಿದ್ದನ್ನು ಕಂಡು 3 ಜನ ದರೋಡೆಕೋರರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಒಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇಬ್ಬರು ದರೋಡೆಕೋರರು ಪರಾರಿಯಾಗಿದ್ದು, ಈ ಸಂಬಂಧ ಮಾನ್ವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share and Enjoy !

Shares