ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಭಾರತಿ ಸುಧಾಕರ್ ಪಾಟೀಲ್ ,ಉಪಾಧ್ಯಕ್ಷರಾಗಿ ಮೊಹಮ್ಮದ್ ಶಫಿ ಆಯ್ಕೆ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ

ಕೊಟ್ಟೂರು : ತಾಲೂಕಿನ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಭಾರತಿ ಸುಧಾಕರ್ ಪಾಟೀಲ್ ಮತ್ತು ಉಪಾಧ್ಯಕ್ಷರಾಗಿ ಮೊಹಮ್ಮದ್ ಶಫಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಗಳಾದ ತಹಶೀಲ್ದಾರ್ ಅನಿಲ್ ಕುಮಾರ ಘೋಷಿಸಿದರು .ನಾಮಪತ್ರ ಸಲ್ಲಿಸಿದವರಲ್ಲಿ ಬಿಜೆಪಿಯಿಂದ ಇಂದಿರಾ ಮತ್ತು ತಿಪ್ಪೇಸ್ವಾಮಿ ಪ್ರತಿಸ್ಪರ್ಧೆ ಒಡ್ಡಿದ್ದರು .ಮಧ್ಯಾಹ್ನದ ವೇಳೆಗೆ ನಾಮಪತ್ರ ವಾಪಸ್ ಪಡೆಯುವ ಗಡುವು ಮುಗಿದರೂ ಯಾರೂ ನಾಮ ಪತ್ರ ವಾಪಸ್ ಪಡೆಯದ ಕಾರಣ ಒಂದು ಗಂಟೆಗೆ ಚುನಾವಣೆ ಪ್ರಕ್ರಿಯೆ ಆರಂಭಗೊಂಡು ಕಾಂಗ್ರೆಸ್ ನಿಂದ 16ನೇ ವಾರ್ಡ್ ಸದಸ್ಯರಾದ ಭಾರತಿ ಪಾಟೀಲ್ ಬಿಜೆಪಿಯ ಇಂದಿರಾ ಅವರನ್ನು 11-07ಮತಗಳ ಅಂತರದಲ್ಲಿ ಪರಾಭವಗೊಳಿಸಿ ವಿಜಯ ಮಾಲೆ ಧರಿಸಿದರು .ಇಬ್ಬರು ಪಕ್ಷೇತರ ಸದಸ್ಯರು ಹಾಗು ಒಬ್ಬ ಬಿಜೆಪಿ ಮಹಿಳೆ ಸದಸ್ಯರು ಚುನಾವಣೆಯಿಂದ ದೂರ ಉಳಿದಿದ್ದು ಚರ್ಚೆಗೆ ಗ್ರಾಸವಾಗಿತ್ತು .ಬಳ್ಳಾರಿ ಸಂಸದರಾದ ದೇವೇಂದ್ರಪ್ಪ ಚುನಾವಣೆ ಪ್ರಕ್ರಿಯೆಯಲ್ಲಿ ಬಾಗವಹಿಸಿದರೂ ಸಂಖ್ಯಾ ಬಲ ದ ಕೊರತೆಯಿಂದ ಪಟ್ಟಣ ಪಂಚಾಯತ್ ಆಡಳಿತ ಕೈ ವಶವಾಯಿತು .ಇದರೊಂದಿಗೆ ಕೊಟ್ಟೂರಿನ ಪ್ರಭಾವಿ ಮುಖಂಡ ಹರ್ಷವರ್ಧನ್ ಕಳೆದ 25 ವರ್ಷಗಳಿಂದ ಪಟ್ಟಣದಲ್ಲಿ ಸ್ಥಳೀಯ ಆಡಳಿತದ ಹಿಡಿತ ಸಾದಿಸಿದ್ದಾರೆ .ಶಾಸಕರಾದ ಎಸ್ .ಭೀಮಾನಾಯ್ಕ್ ಮಾತನಾಡಿ ಕೊಟ್ಟೂರು ಪಟ್ಟಣ ದ ಅಭಿವೃದ್ಧಿ ವಿಚಾರವಾಗಿ ತಾರತಮ್ಯ ಮಾಡದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾದರಿಯಾಗಿ ಕಾಂಗ್ರೆಸ್ ಪಕ್ಷ ಕಾರ್ಯ ನಿರ್ವಹಿಸುತ್ತದೆ .ಎಂದು ತಿಳಿಸಿದರು .ಈ ಸಂದರ್ಭದಲ್ಲಿ ಮುಖ್ಯಾದಿಕಾರಿ ಗಿರೀಶ್ .ಸುಧಾಕರ ಪಾಟೀಲ್ ಹಾಗೂ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಜರಿದ್ದರು

Share and Enjoy !

Shares