ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ
ಕೊಟ್ಟೂರು : ಸಂಕಷ್ಟದಲ್ಲಿರುವ ಖಾಸಗಿ ಅನುದಾನ ರಹಿತ ಶಿಕ್ಷಣ ವಲಯಕ್ಕೆ ಸರ್ಕಾರ ಕೂಡಲೇ ಆರ್ಥಿಕ ಪ್ಯಾಕೆಜ್ ಘೋಷಿಸಬೇಕು ಎಂದು ರೂಪ್ಸ್ (RUPSA)ಸಂಘಟನೆ ರಾಜ್ಯಾಧ್ಯಕ್ಷರಾದ ಲೋಕೇಶ್ ತಾಳಿಕಟ್ಟೆ ಆಗ್ರಹಿಸಿದರು .ಕೊಟ್ಟೂರಿನ ಇಂದು ಶಿಕ್ಷಣ ಸಂಸ್ಥೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಸಂಘಟನೆಯ ಪದಾಧಿಕಾರಿಗಳು ಶಿಕ್ಷಣ ಇಲಾಖೆಯ ವಿರುದ್ಧ ವಾಗ್ದಾಳಿ ನಡೆಸಿದರು. ಕೊರೋನಾಘಾತದಿಂದ ಅನುದಾನರಹಿತ ಶಿಕ್ಷಕರಿಗೆ ಒಂದು ರೂಪಾಯಿಯನ್ನು ನೀಡದಿರುವುದು ಖಂಡನೀಯವಾಗಿದೆ .ಸರ್ಕಾರವು ಕಾರ್ಪೊರೇಟ್ ಶಾಲೆಗಳನ್ನು ಸಾಕುತ್ತಿದ್ದು ಬಜೆಟ್ ಶಾಲೆಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿವೆ .ಇಂದು ಶಿಕ್ಷಣ ಇಲಾಖೆಯಲ್ಲಿ ಪರವಾನಿಗೆ ನವೀಕರಣಕ್ಕಾಗಿ ಒತ್ತಡ ಹೇರುತ್ತಿದ್ದು ಅದೇ ಕೇಂದ್ರ ಪಠ್ಯ ಕ್ರಮ ಹೊಂದಿದ ಶಾಲೆಗಳ ಮಾನ್ಯತೆ ಸಲೀಸಾಗಿ ನಡೆಯುತ್ತಿದೆ .ಈ ಅನ್ಯಾಯ ಕೇಳಲು ಶಿಕ್ಷಣ ಮಂತ್ರಿಗಳಿಗೆ ಪುರು ಸೊತ್ತಿಲ್ಲವಾಗಿದೆ ಎಂದು ಛೇಡಿಸಿದರು .ರಾಜ್ಯ ಕಾರ್ಯದರ್ಶಿ ಶಶಿಧರ ದಿಂಡೂರ ಮಾತನಾಡಿ ರಾಜ್ಯದಲ್ಲಿ ಶಾಲೆಗಳಿಲ್ಲದೆ ಸುಮಾರು 40ಲಕ್ಷ ಕುಟುಂಬಗಳು ಬೀದಿಗೆ ಬಿದ್ದಿವೆ ಹಾಗೂ 5ಲಕ್ಷ ಸಿಬ್ಬಂದಿಗಳು ಮತ್ತು 19000ಶಾಲೆಗಳು ನೆಲೆ ಕಾಣದೆ ಸಹಾಯ ಹಸ್ತಕ್ಕೆ ಕೈ ಚಾಚಿದ್ದು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ಬೆಳಗಾವಿಯಿಂದ ಬೆಂಗಳೂರು ವರೆಗೂ ರಥಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು .ಇಂದು ಶಿಕ್ಷಣ ಸಂಸ್ಥೆಯ ಎಚ್ .ಎನ್ .ವೀರಭದ್ರಪ್ಪ ಮಾತನಾಡಿ ಇಂದು ಖಾಸಗಿ ಶಾಲೆಗಳು ದಿವಾಳಿ ಹಂತಕ್ಕೆ ತಲುಪಿದರೂ ಇಂತಹ ಸಂಧರ್ಭದಲ್ಲಿ ವಾಹನ ಕಂತು ,ವಿಮೆ ಸಾಲದ ಬಾಫ್ತು ಇತರ ಶುಲ್ಕಗಳಿಗೆ ವಿನಾಯಿತಿ ನೀಡದಿರುವುದು ದುರದೃಷ್ಟಕರ ಆದ್ದರಿಂದ ಸರ್ಕಾರ ಕೂಡಲೇ ಶಿಕ್ಷಕರಿಗೆ ಗೌರವ ಧನ ಬಿಡುಗಡೆ ಮಾಡಿ ಬಾಕಿ ಉಳಿದ ಎಲ್ಲಾ ಶುಲ್ಕಗಳನ್ನು ಪಾವತಿಸಬೇಕು ಎಂದು ಹಕ್ಕೊತ್ತಾಯ ಮಾಡಿದರು RUPSA ಸಂಘಟನೆಯ ಜಿ .ಎಂ .ಕೊಟ್ರೇಶ್ ,ಶಿವ ಕುಮಾರ ,ಉಮಾ ಪ್ರಭಾಕರ್ ಇತರರು ಉಪಸ್ಥಿತರಿದ್ದರು .