ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು :ತಾಲ್ಲೂಕಿನ ಜಾಗೀರನಂದಿಹಾಳ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಯ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಈ ವೇಳೆ.. ಶರಣಬಸವ ಮ್ಯಾಡಿ ಮಾತನಾಡಿ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಕಿಚ್ಚು ಹಚ್ಚಿದ ಸ್ವಾತಂತ್ರ್ಯ ಹೋರಾಟಗಾರ ಅವರ ದೇಶ ಪ್ರೇಮ ಆಪಾರವಾಗಿದ್ದು ಆದರ್ಶದಲ್ಲಿ ನಾವು ನಡೆಯಬೇಕಾಗಿದೆ.ದೇಶದಲ್ಲಿ ಕೊರೊನಾ ವೈರಸ್ ಮಾಹಾಮಾರಿ ರೋಗದಿಂದ ದೇಶ ತತ್ತರಿಸಿದೆ ಮಕ್ಕಳ ಶಿಕ್ಷಣದಿಂದ ದೂರ ಉಳಿದ್ದಿದ್ದಾರೆ ಪೋಷಕರು ಶಿಕ್ಷಣ ಬಗ್ಗೆ ಕಾಳಜಿ ವಹಿಸಬೇಕು
ಸಂಗೊಳ್ಳಿ ರಾಯಣ್ಣ ಇತಿಹಾಸ ಎಷ್ಟು ಹೇಳಿದರೆ ಸಾಲದುಡಿ.ಜಿ.ಗುರಿಕಾರ ಮಾತನಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದೇಶ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಅವರ ಧೈರ್ಯ ಎದೆಗಾರಿಕೆ ಮೆಚ್ಚ ತಕ್ಕದ್ದು ಸಂಗೊಳ್ಳಿ ರಾಯಣ್ಣ ಅವರ ಒಂದು ಜಾತಿಗೆ ಸಿಮೀತವಾದ ವ್ಯಕ್ತಿಯಲ್ಲ ಅವರ ದೇಶದ ಆಸ್ತಿ.ಈಗಿನ ಯುವಕರು ಅವರ ಆದರ್ಶದಲ್ಲಿ ನಡೆಯಬೇಕಾಗಿದೆಗದ್ದೆನಗೌಡ ಪಾಟೀಲ್ ಮಾತನಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ (ರಿ) ಸಂಘಟನೆಯ ಉದ್ದೇಶ ಪ್ರತಿ ಹಳ್ಳಿಯಲ್ಲಿ ಮೂರ್ತಿ ಪ್ರತಿಷ್ಠಾಪಿಸುವುದು ನಮ್ಮ ಗುರಿ.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರಿಗೆ ರಾಜ್ಯದಲ್ಲಿ ಅವಮಾನ ಅನ್ಯಾಯ ಆದರೆ ನಾವು ಸುಮ್ಮನೆ ಇರಲ್ಲ ಹೋರಾಟ ಮಾಡಿ ಆದರು ನಮ್ಮ ಹಕ್ಕುಗಳನ್ನು ಪಡೆಯುತ್ತೆವೆ.ಮೊದಲನೆಯದಾಗಿಕಲ್ಯಾಣ ಕರ್ನಾಟಕದಲ್ಲಿ ಅದು ಸಂಗೊಳ್ಳಿ ರಾಯಣ್ಣನವರ ಮೂರ್ತಿ ಇರುವುದು ಲಿಂಗಸೂಗೂರು ತಾಲ್ಲೂಕಿನ ಜಾಗೀರನಂದಿಹಾಳ ಗ್ರಾಮದಲ್ಲಿ.ಸಮಾಜದ ವಿಚಾರ ಬಂದ್ದಾಗ ರಾಜಕೀಯ, ವಯಕ್ತಿಕ ವಿಚಾರವನ್ನು ಬಿಟ್ಟು ಸಮಾಜದ ಶ್ರೇಯಾಭಿವೃದ್ಧಿಗೆ ಶ್ರಮಿಸಬೇಕು ಆಗ ಸಮಾಜದ ಅಭಿವೃದ್ಧಿ ಸಾದ್ಯ ಎಂದರು.ಈ ಸಂದರ್ಭದಲ್ಲಿಸಿದ್ದರಾಮಯ್ಯ ಗುರುವಿನ್ ಜಾಗೀರನಂದಿಹಾಳ,ಚಿಂದನಂದಯ್ಯ ಗುರುವಿನ್ ಹುನ್ನಕುಂಟಿ, ನಾಗಪ್ಪ ಡಿ.ವಜ್ಜಲ್, ಸಿದ್ದು ಬಂಡಿ.ಮಹ್ಮದ್ ರಪೀ ಪುರಸಭಾ ಉಪಾಧ್ಯಕ್ಷರುರವೂಪ್ ಗ್ಯಾರಂಟಿ ಗದ್ದೆನಗೌಡ ಪಾಟೀಲ್ಪರಮೇಶ ಗೋರ್ ಶಿವರಾಯಪ್ಪಇಸ್ಲಾಂಪುರ,ಶಾಂತಪ್ಪ ಆನ್ವರಿ ತಾಲ್ಲೂಕು ಕುರುಬ ಸಂಘದ ಅದ್ಯಕ್ಷರುಹನಮಂತಪ್ಪ ತೊಗರಿ ಹಾಗೂಜನಪದ ಶೈಲಿಯ ಗಾಯಕ ಹನಮಂತ ಬಟ್ಟೂರು ತಂಡ ಮತ್ತು ಇತರೆ ಮುಖಂಡರು ಭಾಗವಹಿಸಿದ್ದರು.