ಬ್ಯಾಂಕ್, ಮನೆಗಳ್ಳರ ಬಂಧನ :ಬಂಗಾರ ಹಾಗೂ ಬೈಕ್ ವಶ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಮಾನ್ವಿ:ಬ್ಯಾಂಕ್ ಕಳ್ಳತನ ಯತ್ನ ,ಮನೆ ಕಳ್ಳತನ ಮಾಡಿದ್ದ ಮೂವರು ಆರೋಪಿಗಳ್ಳನ್ನು ಬಂಧಿಸಿಲಾಗಿದೆ ಎಂದು ಸಿಂಧನೂರು ಡಿವೈಎಸ್ ಪಿ ವಿಶ್ವನಾಥ ಕುಲಕರ್ಣಿ ತಿಳಿಸಿದರು.
ಅವರು ಶನಿವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು, ಪಟ್ಟಣದ ಇಸ್ಲಾಂ ನಗರದ ಅಬ್ಬಾಸ್ ಖಾನ್(21), ಆದಾಪೂರ ಪೇಟೆಯ ಜಾಫರ್ ಸಾದಿಕ್ (21) ಹಾಗೂ ಮಂಡಾಳ ಬಟ್ಟಿ ಹತ್ತಿರದ ಜಾವೇದ್ ಅಕ್ತರ ಎನ್ನುವ ಆರೋಪಿಗಳನ್ನು ಬಂಧಿಸಲಾಗಿದೆ.
ಮಾನ್ವಿ ಪಟ್ಟಣದ ಕೆನರಾ ಬ್ಯಾಂಕ್ ಎಟಿಎಮ್, ಹಾಗೂ ಹಿರೆ ಕೋಟೆಕಲ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿರವಾರ ಪಟ್ಟಣದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ರಾಯಚೂರ ನಗರದ ಸಿಂಡಿಕೇಟ್ ಬ್ಯಾಂಕ್ ಎಟಿಎಮ್ ಗಳ ಶಟರ್ ಮುರಿದು ಕಳ್ಳತನ ಮಾಡಲು ಪ್ರಯತ್ನ ಮತ್ತು ಮಾನ್ವಿ ಪಟ್ಟಣದ ಡಿಪೋ ಹಿಂದುಗಡೆ ಮನೆ ಹಾಗೂ ಬಸವ ನಗರದಲ್ಲಿ ಒಂದು ಮನೆ ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಒಂದು ಸ್ಕೂಟರ್, ಒಂದು ಮೋಟಾರ್ ಸೈಕಲ್, 8 ತೊಲೆ ಬಂಗಾರದ ಆಭರಣಗಳು, 15000 ರೂ ನಗದು ಹಣ ಒಂದು ಮೊಬೈಲ್ ಸೇರಿ ಒಟ್ಟು 3, 39, 000 ರೂ ಮೌಲ್ಯದ ವಸ್ತುಗಳನ್ನು ಜಪ್ತಿಮಾಡಿಕೊಳ್ಳಲಾಗಿದೆ ಎಂದರು.
ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ್ ನಿಕ್ಕಿಮ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀಹರಿಬಾಬು, ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಸಿಪಿಐ ದತ್ತಾತ್ರೇಯ ಕಾರ್ನಾಡ್, ಮಾನ್ವಿ ಪಿಎಸ್ಐ ಸಿದ್ದರಾಮ ಬಿದರಾಣಿ, ಕವಿತಾಳ ಪಿಎಸೈ ಸುಜಾತ ನಾಯಕ, ಕವಿತಾಳ ಪಿಎಸೈ ವೆಂಕಟೇಶ್, ಎಎಸೈ ಬಸವರಾಜ್, ಯಂಕನಗೌಡ, ಸಿಬ್ಬಂದಿಗಳಾದ ಬಸವರಾಜ್ ಎಎಚ್ ಸಿ, ರಾಮಪ್ಪ, ಮಲ್ಲಾರಡ್ಡೆಪ್ಪ, ಗೋವಿಂದ್ ರಾಜ್, ಆಫ್ಜಲ್ ಪಾಷಾ, ಹುಸೇನ್ ಸಾಬ, ಚಾಂದಪಾಶ, ಡೇವಿಡ್, ಶಿವಾರೆಡ್ಡಿ, ಶಾಂತಕುಮಾರ್ ಇವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.
ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಪಿಐ ದತ್ತಾತ್ರೇಯ ಕಾರ್ನಾಡ್, ಪಿಎಸೈಗಳಾದ ಸಿದ್ರಾಮ ಬಿದರಾಣಿ, ವೆಂಕಟೇಶ್, ಸುಜಾತ ಇದ್ದರು.

Share and Enjoy !

Shares