ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ .
ಮಾನ್ವಿ: ಭತ್ತದ ಕಟಾವು ಯಂತ್ರದ ದರವನ್ನು ನಿಗದಿಗೊಳಿಸುವಂತೆ ಒತ್ತಾಯಿಸಿ ಗುರುವಾರ ತಾಲೂಕ ಬಿಜೆಪಿ ರೈತ ಮೋರ್ಚಾ ಮಾನವಿ ಮಂಡಲ ವತಿಯಿಂದ ತಹಸೀಲ್ದಾರ್ ಮನವಿ ಸಲ್ಲಿಸಿದರು.
ರಾಜ್ಯಾದಂತ ಕೊವಿಡ್ -19 ಇರುವುದರಿಂದ ಅರ್ಥಿಕ ಸಂಕಷ್ಟದಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ, ಹಾಗೂ ಈಚೆಗೆ ಸುರಿದ ಬಾರೀ ಮಳೆಗೆ ಭತ್ತದ ಬೆಳೆ ಸಂಪೂರ್ಣ ನಾಶವಾಗಿದ್ದು ಇದರಿಂದ ಭತ್ತದ ಇಳುವರಿಯಲ್ಲಿಯೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವುದರಿಂದ ಇಂತಹ ಸಮಯದಲ್ಲಿ ಭತ್ತ ಕಟಾವು ಯಂತ್ರದ ಮಾಲೀಕರು ಬೇಕಾಬಿಟ್ಟಿ ದರ ನಿಗದಿ ಮಾಡಿ ಸಾಂದರ್ಭಿಕ ಕೊರತೆ ಸೃಷ್ಟಿಸಿ ಹೆಚ್ಚಿನ ದರ ವಸೂಲಿ ಮಾಡಿ ಶೋಷಿಸುತ್ತಿದ್ದಾರೆ.
ಈಗಾಗಲೇ ದಾವಣಗೆರೆ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ವಿಪತ್ತು ನಿರ್ವಹಣೆ ಕಾಯ್ದೆ 2005ರಲ್ಲಿ ಪದತ್ತವಾದ ಹಕ್ಕನ್ನು ಚಲಾಯಿಸಿ ಭತ್ತದ ಕೊಯ್ಲಿನ ಯಂತ್ರದ ದರವನ್ನು ಪ್ರತಿ ಗಂಟೆಗೆ ರೂ.1800/- ರಂತೆ ನಿಗದಿಪಡಿಸಿ ಆದೇಶ ಹೊರಡಿಸಿದ್ದಾರೆ. ಇದರಿಂದ ಅಲ್ಲಿನ ರೈತರನ್ನು ಅಧಿಕ ದರ ವಸೂಲಿ ಮಾಡಿ ವಂಚಿಸುವವರಿಂದ ತಪ್ಪಿಸಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಅನ್ನದಾತರ ಹಿತದ್ರಷ್ಟಿಯಿಂದ ಸಾರ್ವಜನಿಕವಾಗಿ ಪ್ರಕಟಿಸಿ ಭತ್ತದ ಕಟಾವು ಯಂತ್ರದ ದರವನ್ನು ನಿಗದಿಗೊಳಿಸಬೇಕು ಎಂದು ತಹಸೀಲ್ದಾರ್ ಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂಧರ್ಬದಲ್ಲಿ ತಾಲೂಕ ಬಿಜೆಪಿ ರೈತ ಮೋರ್ಚಾ ಮಾನವಿ ಮಂಡಲ ಜಿಲ್ಲಾ ಕೋಶಧ್ಯಕ್ಷ ಶಿವಲಿಂಗಯ್ಯ ಸ್ವಾಮಿ ಜಂಬಲದಿನ್ನಿ, ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಕಣ್ಣೂರು, ಮತ್ತು ಮಲ್ಲೇಶ ನಾಯಕ ಕಡದಿನ್ನಿ, ಮಂಜುನಾಥ ನಾಯಕ, ಮಹೇಶ ಗೌಡ, ಚಂದ್ರು ಜಾನೇಕಲ್, ಜೂಕೂರು ನರಸಪ್ಪ, ತಿಮ್ಮಯ್ಯ ನಾಯಕ, ವೆಂಕಟೇಶ ನಾಯಕ, ಲಕ್ಷ್ಮಣ, ಶಿವುಕುಮಾರ ಗೋವಿನದೂಡ್ಡಿ, ಪರಶುರಾಮ ಬಾಗಲವಾಡ ಇದ್ದರು.