ಸಿರಿಗೇರಿ ಅಂಬ್ಯುಲೆನ್ಸ್ ಚಾಲಕನನ್ನು ಕೆಲಸದಿಂದ ವಜಾಗೊಳಿಸುವಂತೆ ಸಾರ್ವಜನಿಕರ ಒತ್ತಾಯ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ

ಸಿರುಗುಪ್ಪ: ತಾಲೂಕಿನ ಸಿರಿಗೇರಿ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಅಂಬ್ಯುಲೆನ್ಸ್ ಚಾಲಕನಾಗಿ ಸೇವೆ ಸಲ್ಲಿಸುತ್ತಿರುವ ಎನ್. ವಿರುಪಾಕ್ಷಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ಗ್ರಾಮದ ಸಾರ್ವಜನಿಕರು ಕೇಂದ್ರದ ವೈದ್ಯಾಧಿಕಾರಿ ಡಾ. ತಿಪ್ಪೆರೆಡ್ಡಿ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಮಾತನಾಡಿ, ಸಮಯ ಪಾಲನೆ, ರೋಗಿಗಳಿಗೆ ಸ್ಪಂದಿಸದೆ ಬೇಜವಾಬ್ದಾರಿ ತನದಿಂದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೆ ರೋಗಿಗಳ ಸಂಬಂಧಿಗಳ ಅತ್ತಿರ ಸಂಚಾರ ಮದ್ಯದಲ್ಲಿ ಹಣದ ಬೇಡಿಕೆಯನ್ನು ಇಡುವುದಲ್ಲದೆ ಸಾರ್ವಜನಿಕರ ವಾಗ್ವಾದಕ್ಕೆ ಇಳಿಯುತ್ತಾನೆ ಎಂದು ಆರೋಪಿಸಿದರು. ಕೆಲಸಕ್ಕೆ ಸರಿಯಾದ ಸಮಯದಲ್ಲಿ ಹಾಜರಾಗದೆ ರೋಗಿಗಳೊಂದಿಗೆ ಸಮರ ನಡೆಸುತ್ತಾನೆ. ಸಂಬಂಧ ಇಲ್ಲದ ವಿಷಯಕ್ಕೆ ತೆಲೆ ತೂರಿಸಿ ಅನಾವಶ್ಯಕಾಗಿ ಮೈ ಮೇಲೆ ಹೇರಿಗಿ ಕೊಳ್ಳುತ್ತಾನೆ ಆದ್ದರಿಂದ ಹಲವು ಬಾರಿ ತಿಳಿ ಹೇಳಿದರೂ ಕಿವಿಗೊಡದೆ ಹಾಗೆ ಮುಂದುವರಿಸುತ್ತಿದ್ದಾನೆ ಕೂಡಲೇ ಈತನ ಮೇಲೆ ಸಂಬಂದಿಸಿದ ವೈದ್ಯಾಧಿಕಾರಿಗಳು ಕಾನೂನು ಕ್ರಮ ಕೈಗೊಂಡು ಆತನನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಹನುಮಂತ, ಎಚ್. ಶೇಖಣ್ಣ, ಹನುಮಂತ, ಜಿ. ಶಿವರಾಮ, ತಿಪ್ಪೇಸ್ವಾಮಿ, ಈರಣ್ಣ, ನಾಗೇಂದ್ರ, ಬಸವರಾಜ, ಹೊನ್ನೂರಪ್ಪ, ಬಸವ ಸೇರಿದಂತೆ ಇತರರು ಇದ್ದರು.

Share and Enjoy !

Shares