ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ..
ಸಿಂಧನೂರು: ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಯೋಗಿತಾ ಬಾಯಿ ಮೇಲೆ ನಾನು ಹಲ್ಲೆ ಮಾಡಿದ್ದರೆ ಯಾಕೆ ಇನ್ನೂ ದೂರು ನೀಡಿಲ್ಲ.
ಭ್ರಷ್ಟಾಚಾರ ಹೊರಗೆ ಬರುವ ಭಯದಿಂದ ಶಾಸಕರ ಕುಮ್ಮಕ್ಕಿನಿಂದ ಈ ರೀತಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀದೇವಿ ಶ್ರೀನಿವಾಸ್ ಹೇಳಿದರು ..
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಯೋಗಿತಾ ಬಾಯಿ ಯವರು ತಾನು 8ವರ್ಷದಲ್ಲಿ ಮಾಡಿದ ಭ್ರಷ್ಟಾಚಾರದ ಹೊರಗೆ ಬೀಳುವ ಭಯದಿಂದ ನೂತನವಾಗಿ ಶಿಶು ಅಭಿವೃದ್ಧಿ ಯೋಜನಧಿಕಾರಿ ಸುದೀಪ್ ಕುಮಾರ್ ರನ್ನು ವರ್ಗಾವಣೆ ಮಾಡಬೇಕು.
ಜೊತೆಗೆ ಜನರ ಕರುಣೆಯನ್ನು ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಶಾಸಕರ ಕುಮ್ಮಕ್ಕಿನಿಂದ ಈ ರೀತಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಒಂದು ವೇಳೆ ನಾನು ಹಲ್ಲೆ ಮಾಡಿದ್ದರೆ ಯಾಕೆ ಇನ್ನೂ ದೂರು ನೀಡಿಲ್ಲ.
ಈಗಾಗಲೇ ತಾಲ್ಲೂಕು ದಂಡಾಧಿಕಾರಿ ಮಂಜುನಾಥ್ ಭೋಗಾವತಿ ರವರು ನನ್ನ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸುದೀಪ್ ಕುಮಾರ್ ಅಶೋಕ್, ಯೋಗಿತಾಬಾಯಿ ರನ್ನು ವಿಚಾರಣೆ ಮಾಡಿ ವರದಿ ಪಡೆದಿದ್ದಾರೆ.
ಯಾರೇ ಬಂದರೂ ನನ್ನ ಕಛೇರಿಯಲ್ಲಿ ಬಹಿರಂಗ ಚರ್ಚೆಗೆ ನಾನು ಸದಾ ಸಿದ್ಧ ಎಂದು ತಿಳಿಸಿದರು ..