ಕಾಲೇಜು ಆರಂಭ ,ಬಾರದ ವಿದ್ಯಾರ್ಥಿಗಳು. ವಿದ್ಯಾರ್ಥಿ ಪೋಷಕರಿಗೆ ಮಾಹಿತಿ ಕೊರತೆ,

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಮಸ್ಕಿ : ಕಳೆದ ಏಳೆಂಟು ತಿಂಗಳುಗಳಿಂದ ಶಾಲಾ ಕಾಲೇಜುಗಳು ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಬಾಗಿಲು ಹಾಕಿದ್ದವು work At Home.ಮನೆಯಿಂದ ಕೆಲಸ ಎಂಬ ಟ್ಯಾಗ್ ಲೈನ್ ನೊಂದಿಗೆ ಆರಂಭವಾಗಿ ಅಂತರ್ಜಾಲದ ಮೂಲಕ ಆನ್ಲೈನ್ ಪಾಠ ನಡೆಯುತ್ತಿವೆ. ಆದರೆ ಅದಕ್ಕೆ ಅಪಾರ ವಿರೋಧವ್ಯಕ್ತವಾಗಿತ್ತು ,
ಆ ವಿರೋಧಗಳ ಮಧ್ಯಯೂ ಇಲ್ಲಿಯವರೆಗೆ ಆನ್ಲೈನ್ ಮೂಲಕ ಪಾಠ ನಡೆಯುತ್ತಿದ್ದವು
ಈಗ ಸರಕಾರದ ನಿರ್ದೇಶನದ ಮೇರೆಗೆ ಕಾಲೇಜುಗಳು ಪುನರಾರಂಭ ಗೊಂಡಿವೆ . ಇದರಲ್ಲಿ ಅನೇಕ ಗೊಂದಲಗಳು ಇವೆ.
* ಕೋವಿಡ್ ಪರೀಕ್ಷೆ ಕಡ್ಡಾಯ ಮತ್ತು ಅದರ ವರದಿ ಸಲ್ಲಿಕೆ.
* ಪರೀಕ್ಷೆ ಖಾಸಗಿಯಾಗಿ ವಿದ್ಯಾರ್ಥಿಗಳೇ ಮಾಡಿಸಿಕೊಂಡು ಬರಬೇಕೊ ಅಥವಾ ಕಾಲೇಜ್ ಆವರಣದಲ್ಲಿ ಸರಕಾರ ಮಾಡಿಸಿ ಕೊಡುತ್ತದೆಯೋ.
*ಕೋವಿ ಡ್ ಪರೀಕ್ಷೆ ಮಾಡಿಸಿಕೊಳ್ಳಲು ದೀಪಾವಳಿಯ ಸಾಲು ಸಾಲು ರಜೆಗಳು ಅಡ್ಡಿ ಪಡಿಸಿವೆ.
*ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಕರ ಅನುಮತಿ ಪತ್ರ ತರುವಂತೆ ಆದೇಶ ಮಾಡಿದ ಆದರೆ ಅದರಲ್ಲಿ ವಿದ್ಯಾರ್ಥಿಗಳಿಗೆ ಸರಕಾರವಾಗಲಿ ಕಾಲೇಜು ಆಡಳಿತ ಮಂಡಳಿ ಆಗಲಿ ಯಾವುದೇ ಜವಾಬ್ದಾರಿ ತೆಗೆದು ಕೊಳ್ಳದೆ ಅದೆಲ್ಲವನ್ನೂ ಪೋಷಕರ ಮೇಲೆ ಹಾಕಿದ್ದು ಭಾರಿ ಗೊಂದಲಕ್ಕೆ ಕಾರಣವಾಗಿದೆ.
ಇಂದು ಕಾಲೇಜು ಪುನರಾರಂಭಕ್ಕೆ ಸಕಲಸಿದ್ದತೆಗಾಳನ್ನು ಮಾಡಿಕೊಂಡಿರುವ ಕಾಲೇಜು ಆಡಳಿತ ಮಂಡಳಿ.
ವಿದ್ಯಾರ್ಥಿಗಳು ತರಗತಿಗಳಿಗೆ ಬರಲು ,ತರಗತಿಗಳನ್ನು ನಡೆಸಲು ಉನ್ನತ ಶಿಕ್ಷಣ ಇಲಾಖೆ ಸೂಕ್ತ ನಿರ್ದೇಶನಗಳನ್ನು ರವಾನೆ ಮಾಡಿದ್ದು ತರಗತಿಗಳು ಎರಡು ಮಾದರಿಯಲ್ಲಿ ನಡೆಯಲಿದ್ದು ಆಫ್ ಲೈನ್ ಹಾಗೂ ಆನ್ ಲೈನ್ ಮೂಲಕ ನಡೆಸಲಾಗುತ್ತದೆ ಇದರಲ್ಲಿ ವಿದ್ಯಾರ್ಥಿಗಳು ತಮಗಿಷ್ಟವಾದ ಆಯ್ಕೆ ಬಯಸಿ ಅದರ ಮೂಲಕ ತರಗತಿ ವ್ಯಾಸಂಗ ಮಾಡಬಹುದು ಎಂದು ಮಸ್ಕಿ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪಂಪನಗೌಡ ಜಿ,ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಚಾರ್ಯರು
ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಪಾಲಕರ ಪೂರ್ವಾನುಮತಿಪತ್ರ ಅವಶ್ಯಕ.

ಕೊವಿಡ್ ಹಿನ್ನೆಲೆಯಲ್ಲಿ ರೋಗಾಣು ನಿರೋಧಕ ದ್ರಾವಣ,(ಸ್ಯಾನಿ ಟೈಜೆರ್) ಸಾಮಾಜಿಕ ಅಂತರ ಪಾಲಿಸುವದು ಕಡ್ಡಾಯ ವಾಗಿದ್ದು ಆರೋಗ್ಯ ಇಲಾಖೆಯಿಂದ ವಿದ್ಯಾರ್ಥಿಗಳ ಕೊರೊನಾ ಪರೀಕ್ಷೆ ಮಾಡಲು ಸಿಬ್ಬಂಧಿಗಳನ್ನು ಕಳುಹಿಸಿ ಸೂಕ್ತ ರೀತಿಯಲ್ಲಿ ಸಹಕರಿಸುತ್ತದೆ .
ಪುರಸಭೆಯಿಂದ ತರಗತಿ ಕೋಣೆಗಳಿಗೆಲ್ಲ ರೋಗಾಣು ನಿರೊಧಕ ದ್ರಾವಣವನ್ನು ಸಿಂಪಡಿಸಲಾಗಿದೆ.
ಎಲ್ಲಾ ಪ್ರಾಧ್ಯಾಪಕರುಗಳಿಗೆ ಪೂರ್ವಭಾವಿ ಸಭೆ ಕರೆದು ನಿಯಮಗಳನ್ನು ತಿಳಿಸಲಾಗಿದೆ , ತರಗತಿಗಳಿಗೆ ವಿದ್ಯಾರ್ಥಿಗಳು ಬರಲು ಯಾವುದೇ ಆತಂಕ ಬೇಡವೆಂದು ಹೇಳಿದರು.
ಕೊರೋನಾ ಕಾರಣದಿಂದ ನಿಬಂಧನೆಗಳಿಗೊಳಪಟ್ಟು ವಿದ್ಯಾರ್ಥಿಗಳು ಪ್ರಾಧ್ಯಾಪಕರು ಕಾಲೇಜಿಗೆ ಬರಬೇಕಾದ ಅನಿವಾರ್ಯತೆ ಬಂದಿದೆ.
ಒಟ್ಟಿನಲ್ಲಿ ತರಗತಿಗಳು ಜರುಗಿ ,ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲವಾದರೆ ಅಷ್ಟೆ ಸಾಕು ಭವ್ಯ ಭವಿಷ್ಯಕ್ಕೆ ಮುನ್ನುಡಿ ಬರೆಯಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಮಹಾಮಾರಿ ಕೋರೋನಾ ದೂರವಾಗಿ ಏತಾವತ್ತಾಗಿ ಜನ ಜೀವನ ನಡೆದರೆ ಸಾಕು ನೆಮ್ಮದಿಯಿಂದ ಬದುಕಲು ಸಾಧ್ಯ ನಾಮ ವಿದ್ಯಾರ್ಥಿಗಳಿಗೆ ಪಾಠ ಕಲಿಸುವ ಅವಕಾಶ ದೊರೆತಂತಾಗಿದೆ ನಮ್ಮ ಜೀವನವು ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಉಪನ್ಯಾಸಕರು ತಿಳಿಸಿದರು.

Share and Enjoy !

Shares